ಕರ್ನಾಟಕ

karnataka

ETV Bharat / bharat

ಕೇಂದ್ರ ಬಜೆಟ್​ ದೇಶದ ಬಜೆಟ್​ ಅಲ್ಲ, ಮತದಾನದ ಬಜೆಟ್​: ಠಾಕ್ರೆ ವ್ಯಂಗ್ಯ - Union Budget focused on poll-bound states

ಸೋಮವಾರ ನಿರ್ಮಲಾ ಸೀತಾರಾಮನ್ ಮಂಡಿಸಿದ ಹಣಕಾಸು ಬಜೆಟ್ ವಿರುದ್ಧ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Maharashtra CM
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ

By

Published : Feb 2, 2021, 11:57 AM IST

ಮುಂಬೈ(ಮಹಾರಾಷ್ಟ್ರ):ಕೇಂದ್ರ ಹಣಕಾಸು ಬಜೆಟ್​​ ಸಾಕಷ್ಟು ಪರ, ವಿರೋಧಗಳು ಕೇಳಿಬರುತ್ತಿವೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೇಂದ್ರ ಸರ್ಕಾರದ ವಿರುದ್ಧ ಬಜೆಟ್ ವಿಚಾರವಾಗಿ ವಾಗ್ದಾಳಿ ನಡೆಸಿದ್ದಾರೆ.

ಈ ಬಾರಿಯ ಬಜೆಟ್​ನಲ್ಲಿ ಇಡೀ ದೇಶದ ಬದಲಿಗೆ, ಪಶ್ಚಿಮ ಬಂಗಾಳ ಸೇರಿದಂತೆ ಚುನಾವಣೆ ಇರುವ ರಾಜ್ಯಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ ಎಂದು ಉದ್ಧವ್ ಠಾಕ್ರೆ ಆರೋಪಿಸಿದ್ದು, ಬಜೆಟ್ ದೇಶಕ್ಕಾಗಿ ಆಗಿರಬೇಕು. ಚುನಾವಣೆಗಳಿಗಾಗಿ ಅಲ್ಲ. ಇದು ದೇಶದ ಬಜೆಟ್, ಚುನಾವಣೆಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ:ಆದಾಯ ಮೀರಿದ ಆಸ್ತಿ ಸಂಪಾದನೆ: 7 ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ದಾಳಿ

ಇಡೀ ದೇಶವೇ ಹಣಕಾಸು ಬಜೆಟ್​ ಮೇಲೆ ನಿರೀಕ್ಷೆಗಳನ್ನು ಇಟ್ಟುಕೊಂಡಿತ್ತು. ಆದರೆ ಮುಂಬರುವ ವಿಧಾನಸಭಾ ಚುನಾವಣೆಗಳ ಮೇಲೆ ಕಣ್ಣಿಟ್ಟು ಬಿಜೆಪಿ ಬಜೆಟ್ ರೂಪಿಸಿದೆ. ಈಗ ಜನರ ನಿರೀಕ್ಷೆಗಳನ್ನು ಕೇಂದ್ರ ಸರ್ಕಾರ ಹೇಗೆ ಪೂರೈಸಲಾಗುತ್ತದೆ? ಎಂದು ಠಾಕ್ರೆ ಪ್ರಶ್ನಿಸಿದ್ದಾರೆ.

ಠಾಕ್ರೆ ಮಾತ್ರವಲ್ಲದೇ ಪ್ರತಿಪಕ್ಷಗಳೂ ಕೂಡಾ ಬಜೆಟ್​ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಚುನಾವಣೆ ನಡೆಯಲಿರುವ ಕೆಲವು ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ABOUT THE AUTHOR

...view details