ಕರ್ನಾಟಕ

karnataka

ETV Bharat / bharat

ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ದರ ಅಚ್ಚರಿಯ ಏರಿಕೆ! - Unemployment rate

ಸಿಎಮ್ಐಇ ಬಿಡುಗಡೆ ಮಾಡಿದ ಹೊಸ ಮಾಹಿತಿಯ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗವು ಕಳೆದ ವಾರ 7.1% ರಷ್ಟಿತ್ತು. ಆದರೆ, ಈ ವಾರ ಇದು 7.66%ಕ್ಕೆ ಏರಿಕೆಯಾಗಿದೆ. ಅಂದರೆ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ದರ ಕಳೆದ ವಾರಕ್ಕಿಂತ ಈ ವಾರ 0.56% ಹೆಚ್ಚಾಗಿದೆ..

Unemployment
ನಿರುದ್ಯೋಗ

By

Published : Jul 29, 2020, 3:11 PM IST

ಹೈದರಾಬಾದ್​ :ದೇಶದ ನಿರುದ್ಯೋಗ ದರವು ಒಂದೇ ವಾರದಲ್ಲಿ 7.94% ರಿಂದ 8.21%ಕ್ಕೆ ಏರಿಕೆ ಕಂಡಿದೆ. ಆಶ್ಚರ್ಯಕರ ಮಾಹಿತಿಯೆಂದರೆ ಗ್ರಾಮೀಣ ಪ್ರದೇಶ ನಿರುದ್ಯೋಗ ದರವು ನಗರದ ನಿರುದ್ಯೋಗ ದರಕ್ಕಿಂತ ಹೆಚ್ಚಾಗಿದೆ. ಇದು ಹೆಚ್ಚು ಆತಂಕಕ್ಕೆ ಕಾರಣವಾಗಿದೆ.

ಜುಲೈ 27ರಂದು ಭಾರತೀಯ ಆರ್ಥಿಕತೆ ಮೇಲ್ವಿಚಾರಣಾ ಕೇಂದ್ರ (ಸಿಎಂಐಇ) ಬಿಡುಗಡೆ ಮಾಡಿದ ವರದಿಯ ಪ್ರಕಾರ ದೇಶದಲ್ಲಿ ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ದರವು ತುಂಬಾ ಹೆಚ್ಚಾಗಿದೆ ಎಂದು ತೋರಿಸುತ್ತದೆ.

ದಿನಾಂಕ/ವಾರ ನಿರುದ್ಯೋಗ ಪ್ರಮಾಣ
ಭಾರತ ನಗರ ಪ್ರದೇಶ ಗ್ರಾಮೀಣ ಪ್ರದೇಶ
26/07/20 8.21 9.43 7.66
19/07/20 7.94 9.78 7.1
12/07/20 7.44 9.92 6.34
05/07/20 8.87 11.26 7.78

ಸಿಎಮ್ಐಇ ಬಿಡುಗಡೆ ಮಾಡಿದ ಹೊಸ ಮಾಹಿತಿಯ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗವು ಕಳೆದ ವಾರ 7.1% ರಷ್ಟಿತ್ತು. ಆದರೆ, ಈ ವಾರ ಇದು 7.66%ಕ್ಕೆ ಏರಿಕೆಯಾಗಿದೆ. ಅಂದರೆ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ದರ ಕಳೆದ ವಾರಕ್ಕಿಂತ ಈ ವಾರ 0.56% ಹೆಚ್ಚಾಗಿದೆ.

ತಿಂಗಳು ನಿರುದ್ಯೋಗ ಪ್ರಮಾಣ
ಭಾರತ ನಗರ ಪ್ರದೇಶ ಗ್ರಾಮೀಣ ಪ್ರದೇಶ
ಜೂನ್​ 10.99 12.02 10.52
ಮೇ 23.48 25.79 22.48
ಏಪ್ರಿಲ್​ 23.52 24.95 22.89
ಮಾರ್ಚ್ 8.75 9.41 8.44

ಭಾರತ ಎದುರಿಸುತ್ತಿರುವ ಗಂಭೀರ ಸವಾಲು ನಿರುದ್ಯೋಗ. ಉದ್ಯೋಗದ ಪ್ರಮಾಣದ ಸತತ ಕುಸಿತ ದೇಶವನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. 2020ರ ಮೊದಲ ತ್ರೈಮಾಸಿಕದಲ್ಲಿ ದೇಶದ ಸರಾಸರಿ ಉದ್ಯೋಗದ ಪ್ರಮಾಣವು ಶೇ.39.2ರಷ್ಟಿತ್ತು. 2020ರ ಏಪ್ರಿಲ್ ವೇಳೆಗೆ ಈ ದರ 27.2ಕ್ಕಿಳಿದಿದೆ. ಇದು ಮೇ ತಿಂಗಳಲ್ಲಿ ಸ್ವಲ್ಪ ಮಟ್ಟಿಗೆ ಅಂದರೆ ಶೇ.29.2ಕ್ಕೆ ಏರಿಕೆಯಾಗಿದೆ. ನಂತರ ಜೂನ್‌ನಲ್ಲಿ ಶೇ.35.9ಕ್ಕೇರುವ ಮೂಲಕ ಮತ್ತೆ ಚೇತರಿಸಿಕೊಂಡಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಪ್ರಮಾಣ ಭಾರಿ ಇಳಿಕೆ ಕಂಡಿದೆ.

ಜೂನ್‌ನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಅತಿ ಹೆಚ್ಚು ನಿರುದ್ಯೋಗ ದರ ಹೊಂದಿರುವ 5 ರಾಜ್ಯಗಳು

ಕ್ರಮ ಸಂಖ್ಯೆ ರಾಜ್ಯ ಪ್ರಮಾಣ
1 ಹರಿಯಾಣ 35.60%
2 ಕೇರಳ 27.70%
3 ಜಾರ್ಖಂಡ್​ 21.50%
4 ಬಿಹಾರ 21.10%
5 ಪಂಜಾಬ್​ 20.00%

ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ದರ ಹೆಚ್ಚಳಕ್ಕೆ ಕಾರಣವೇನು?

  1. ದೇಶದಲ್ಲಿ ಕೋವಿಡ್​ ಲಾಕ್​ಡೌನ್​ ನಂತರ, ಅನ್ಲಾಕ್​ ಪ್ರಕ್ರಿಯೆ ಜಾರಿಯಲ್ಲಿದೆ. ಈ ಹಂತದಲ್ಲಿ ನಗರ ಪ್ರದೇಶದಲ್ಲಿ ಅನೇಕ ಕಾರ್ಖಾನೆಗಳು ಮತ್ತು ಕಚೇರಿಗಳನ್ನು ಮತ್ತೆ ತೆರೆಯಲಾಗಿದೆ. ಹೀಗಾಗಿ ಅನೇಕ ಜನರು ಮತ್ತೆ ಕೆಲಸ ಮಾಡಲು ಆರಂಭಿಸಿದ್ದಾರೆ. ಆದರೆ, ಲಾಕ್‌ಡೌನ್ ಅವಧಿಯಲ್ಲಿ, ಲಕ್ಷಾಂತರ ವಲಸಿಗರು ತಮ್ಮ ಗ್ರಾಮಗಳಿಗೆ ಮರಳಿದ್ದರು. ಈಗ ಅವರು ಪಟ್ಟಣದತ್ತ ಮುಖ ಮಾಡಲು ಹೆದರುತ್ತಾರೆ. ಹೀಗಾಗಿ ಗ್ರಾಮದಲ್ಲಿ ಉದ್ಯೋಗ ದರ ಹೆಚ್ಚುತ್ತಿದೆ.
  2. ಮತ್ತೊಂದು ಪ್ರಮುಖ ಸಮಸ್ಯೆ ಏನೆಂದರೆ, MGNREGA ವಲಯದಲ್ಲಿ ಸರ್ಕಾರ ಘೋಷಿಸುತ್ತಿರುವ 100 ದಿನಗಳ ಕೆಲಸವು ಎಲ್ಲರಿಗೂ ತಲುಪುತ್ತಿಲ್ಲ. ಅನೇಕ ಸಂದರ್ಭಗಳಲ್ಲಿ ಮೊದಲ ಹತ್ತು ದಿನಗಳವರೆಗೆ ಕೆಲಸ ಸಿಕ್ಕ ನಂತರ, ಗ್ರಾಮೀಣ ಭಾಗದ ಜನರು ಮುಂದಿನ ಇಪ್ಪತ್ತು ದಿನಗಳವರೆಗೆ ಮನೆಯಲ್ಲೇ ಕುಳಿತುಕೊಳ್ಳಬೇಕಾಗುತ್ತದೆ. ಇದು ಅವರಿಗೆ ಹೆಚ್ಚು ಲಾಭದಾಯಕವಾಗಿಲ್ಲ.
  3. ಗ್ರಾಮೀಣ ಭಾರತದಲ್ಲಿ ಬಿತ್ತನೆ ಸಮಯ ಮುಗಿಯುತ್ತಾ ಬಂದಿದೆ. ದೇಶದ ಕೆಲ ಭಾಗಗಳಲ್ಲಿ ಮಾನ್ಸೂನ್ ಮಳೆ ಜೋರಾಗಿಯೇ ಸುರಿಯಲಾರಂಭಿಸಿದೆ. ಹೀಗಾಗಿ ಪ್ರವಾಹದಂತಹ ವಿಪತ್ತುಗಳು ಕೃಷಿ ಕ್ಷೇತ್ರದ ಎರಡೂ ಚಟುವಟಿಕೆಗಳನ್ನು ನಿರ್ಬಂಧಿಸಿದೆ.
  4. ಖಾರಿಫ್ ಋತುವಿನ ಕೃಷಿ ಮುಗಿದಿದ್ದು, ಈಗ ಮಳೆ ಪ್ರಾರಂಭವಾಗಿದೆ. ಹೀಗಾಗಿ ಗ್ರಾಮೀಣ ಭಾಗದ ಜನರಿಗೆ ತಕ್ಷಣ ಉದ್ಯೋಗ ಸಿಗುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಪ್ರದೇಶದ ನಿರುದ್ಯೋಗ ಹೆಚ್ಚಾಗುತ್ತದೆ.
  5. ಅನೇಕ ಜನರು ಹಣ ಗಳಿಕೆಗಾಗಿ ಸಣ್ಣ ಸಣ್ಣ ಅಂಗಡಿಗಳು, ತರಕಾರಿ ಮಾರಾಟ, ಚಹಾ ಅಂಗಡಿಗಳನ್ನು ತೆರೆಯುತ್ತಾರೆ. ಆದರೆ, ಅದು ಲಾಭದಾಯಕ ಉದ್ಯೋಗವಲ್ಲ. ಸ್ವಾಭಾವಿಕವಾಗಿ ಗ್ರಾಮೀಣ ಪ್ರದೇಶಗಳಿಗೆ ಹಿಂದಿರುಗಿದ ಜನರು ಕೆಲಸವಿಲ್ಲದೆ ನಿರುದ್ಯೋಗ ದರವು ಹೆಚ್ಚಾಗುತ್ತಿದೆ.

ABOUT THE AUTHOR

...view details