ಕರ್ನಾಟಕ

karnataka

ETV Bharat / bharat

ಅನುಕಂಪದ ನೆಲೆಯಲ್ಲಿ ಕೆಲಸ ಪಡೆಯಲು ಸ್ವತಃ ಮಗನಿಂದಲೇ ತಂದೆಯ ಕೊಲೆ!! - ಬಾರ್ಕಕಾನಾದಲ್ಲಿ ತಂದೆ ಕೊಲೆ

ಅಪರಾಧದಲ್ಲಿ ಬಳಸಿದ ಸಣ್ಣ ಚಾಕು ಮತ್ತು ಮೃತ ವ್ಯಕ್ತಿಯ ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೊಲೆಯಾದ ವ್ಯಕ್ತಿಯ ಹಿರಿಯ ಮಗ ವಿಚಾರಣೆಯ ಸಮಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ..

Unemployed son kills father to get a job on compassionate ground
ಅನುಕಂಪದ ನೆಲೆಯಲ್ಲಿ ಕೆಲಸ ಪಡೆಯಲು ಸ್ವತಃ ಮಗನಿಂದಲೇ ತಂದೆಯ ಕೊಲೆ!

By

Published : Nov 22, 2020, 10:50 PM IST

ಜಾರ್ಖಂಡ್ : ಸಹಾನುಭೂತಿಯ ನೆಲೆಯಲ್ಲಿ ಪಿಎಸ್‌ಯುನಲ್ಲಿ ಕೆಲಸ ಪಡೆಯಲು ಸೆಂಟ್ರಲ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಸಿಸಿಎಲ್)ನಲ್ಲಿ ಕೆಲಸ ಮಾಡುತ್ತಿದ್ದ ತಂದೆಯನ್ನು 35 ವರ್ಷದ ನಿರುದ್ಯೋಗಿ ಮಗನೊಬ್ಬ ಕೊಂದಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಬಾರ್ಕಕಾನಾದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಮಗರ್​ ಜಿಲ್ಲೆಯ ಬಾರ್ಕಕಾನಾದ ಸಿಸಿಎಲ್‌ನ ಕೇಂದ್ರ ಕಾರ್ಯಾಗಾರದಲ್ಲಿ ಮುಖ್ಯ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣ ರಾಮ್ (55) ಗುರುವಾರ ಮುಂಜಾನೆ ಗಂಟಲು ಸೀಳಿಕೊಂಡ ರೀತಿಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ಪ್ರಕಾಶ್ ಚಂದ್ರ ಮಹ್ತೋ, ರಾಮ್ ಅವರ 35 ವರ್ಷದ ಹಿರಿಯ ಮಗ ಬುಧವಾರ ರಾತ್ರಿ ತನ್ನ ತಂದೆಯ ಗಂಟಲನ್ನು ಗಾಜಿನಿಂದ ಕೊಯ್ದು ಕೊಲೆ ಮಾಡಿದ್ದಾನೆ ಎಂದು ಹೇಳಿದ್ದಾರೆ.

ಅಪರಾಧದಲ್ಲಿ ಬಳಸಿದ ಸಣ್ಣ ಚಾಕು ಮತ್ತು ಮೃತ ವ್ಯಕ್ತಿಯ ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು. ರಾಮ್ ಅವರ ಹಿರಿಯ ಮಗ ವಿಚಾರಣೆಯ ಸಮಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details