ಹೈದರಾಬಾದ್: ತೆಲಂಗಾಣ ಪುರಸಭೆ ಚುನಾವಣೆಯಲ್ಲಿ ಟಿಆರ್ಎಸ್ ವಿಜಯಕ್ಕೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರೇ ಪ್ರಮುಖ ಕಾರಣ ಎಂದು ರಾಜ್ಯ ಪುರಸಭೆ ಸಚಿವ ಕೆ.ಟಿ.ರಾಮ ರಾವ್ ಹೇಳಿದ್ದಾರೆ.
ತೆಲಂಗಾಣ ಪುರಸಭೆ ಚುನಾವಣೆಯಲ್ಲಿ ಟಿಆರ್ಎಸ್ಗೆ ಭರ್ಜರಿ ಜಯ: ಕೆ.ಟಿ ರಾಮರಾವ್ ಹೇಳಿದ್ದೇನು? - telangana Muncipal Election results latest news
ತೆಲಂಗಾಣ ಪುರಸಭೆ ಚುನಾವಣೆಯಲ್ಲಿ ಟಿಆರ್ಎಸ್ ಪಕ್ಷ ಭರ್ಜರಿ ಜಯ ಸಾಧಿಸಿದ್ದು, ಕೆ.ಚಂದ್ರಶೇಖರ್ ರಾವ್ ಅವರೇ ಗೆಲುವಿಗೆ ಪ್ರಮುಖ ಕಾರಣ ಎಂದು ಅವರ ಪುತ್ರ ಹಾಗು ಸಚಿವ ಕೆ.ಟಿ ರಾಮ ರಾವ್ ಹೇಳಿದ್ದಾರೆ.
ತೆಲಂಗಾಣ ಪುರಸಭೆ ಚುನಾವಣೆ ಫಲಿತಾಂಶ:ಟಿಆರ್ಎಸ್ಗೆ ಭರ್ಜರಿ ಜಯ
ಈ ಚುನಾವಣೆ ಫಲಿತಾಂಶ ನಮ್ಮ ಜವಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಪಕ್ಷದ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರು ಮತ್ತು ನಮ್ಮ ಪಕ್ಷಕ್ಕೆ ಮತ ಚಲಾಯಿಸಿದ ಮತದಾರರಿಗೆ ಕೆ.ಟಿ.ರಾಮರಾವ್ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಕೆಸಿಆರ್ ಸರ್ಕಾರ ಜಾರಿಗೆ ತಂದ ನೂತನ ಮುನ್ಸಿಪಲ್ ಕಾಯ್ದೆ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದಿದ್ದಾರೆ.