ಕರ್ನಾಟಕ

karnataka

ETV Bharat / bharat

ಜಾರ್ಪಡಾ ಜೈಲಿನಲ್ಲಿ ವಿಚಾರಣಾಧೀನ ಕೈದಿ ಸಾವು - prisoner death at jharapada spcial jail bhubhaneswa

ಜಾರ್ಪಡಾ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿಯೊಬ್ಬ ತೀವ್ರ ಅನಾರೋಗ್ಯದಿಂದಾಗಿ ಸಾವನ್ನಪ್ಪಿದ್ದಾನೆ.

ವಿಚಾರಣಾಧೀನ ಕೈದಿ ಸಾವು
ವಿಚಾರಣಾಧೀನ ಕೈದಿ ಸಾವು

By

Published : Jan 16, 2021, 5:07 PM IST

ಭುವನೇಶ್ವರ/ ಒಡಿಶಾ: ತೀವ್ರ ಅನಾರೋಗ್ಯದಿಂದಾಗಿ ಜಾರ್ಪಡಾ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿ ಇಂದು ಸಾವನ್ನಪ್ಪಿರುವ ಘಟನೆ ನಡೆದಿದೆ.

ರಬಿದುಲ್ಲಾ ಮೃತ ಕೈದಿ. ಈತನ ವಿರುದ್ಧ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿರುವುದು, ಶಸ್ತ್ರಾಸ್ತ್ರಗಳ ಲೂಟಿ, ಕೊಲೆ ಸೇರಿದಂತೆ ಮುಂತಾದ ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆ ಪೊಲೀಸರು ಆರೋಪಿಯನ್ನು ಬಂಧಿಸಿ, ಜಾರ್ಪಡಾ ಜೈಲಿನಲ್ಲಿರಿಸಿದ್ದರು. ಆದರೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಇಂದು ಜೈಲಿನಲ್ಲೇ ರಬಿದುಲ್ಲಾ ಸಾವನ್ನಪ್ಪಿದ್ದಾನೆ.

ಇನ್ನು ಮೃತ ಕೈದಿಗೆ ಮಾವೋವಾದಿಗಳ ಜೊತೆ ಸಂಪರ್ಕ ಇತ್ತು ಎನ್ನಲಾಗಿದೆ.

For All Latest Updates

ABOUT THE AUTHOR

...view details