ಕರ್ನಾಟಕ

karnataka

ETV Bharat / bharat

2 ಕಿ.ಮೀ ನಡೆದು, ಮೂರ್ಛೆ ಹೋಗಿ ವ್ಯಕ್ತಿ ಸಾವು: ಕೊರೊನಾ ಶಂಕೆ, ಪರೀಕ್ಷೆ - ಕೋವಿಡ್​-19

ವೃದ್ಧನೊಬ್ಬ ಮೂರ್ಛೆಯಿಂದ ರಸ್ತೆಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಕೊರೊನಾ ಸೋಂಕಿನ ಭೀತಿಯಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದ್ದು, ಪರೀಕ್ಷೆ ನಡೆಸಲಾಗುತ್ತಿದೆ.

corona death suspect
ಕೊರೊನಾ ಶಂಕಿತ ಸಾವು

By

Published : Apr 8, 2020, 3:43 PM IST

ದೌಸಾ (ರಾಜಸ್ಥಾನ): ಓರ್ವ ವೃದ್ಧ ಮೂರ್ಛೆಯಿಂದ ರಸ್ತೆಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ದೌಸಾದಲ್ಲಿ ನಡೆದಿದೆ. ಕೊರೊನಾ ಭೀತಿಯ ನಡುವೆ ನಗರದ ಬರ್ಕತ್​​​​ ಪ್ರತಿಮೆಯ ಬಳಿ ಬ್ಯಾಗ್​ನಲ್ಲಿ ಹಿಟ್ಟು ಸಾಗಿಸುತ್ತಿದ್ದ ವೇಳೆ ಮೂರ್ಛೆ ಹೋಗಿ, ರಸ್ತೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.

ಕೊರೊನಾ ಶಂಕಿತ ಸಾವು

ಸ್ಥಳಕ್ಕೆ ಧಾವಿಸಿದ ಪೊಲೀಸರು ಜಿಲ್ಲಾ ಕೊರೊನಾ ನಿಯಂತ್ರಣ ತಂಡಕ್ಕೆ ವಿಷಯ ಮುಟ್ಟಿಸಿದ್ದಾರೆ. ಆದ್ರೆ ಸುಮಾರು ಒಂದು ಗಂಟೆಯ ನಂತರ ಬಂದ ಕೊರೊನಾ ನಿಯಂತ್ರಣ ತಂಡ ಆಸ್ಪತ್ರೆಗೆ ಕರೆದೊಯ್ಯವ ವೇಳೆ ಮಾರ್ಗ ಮಧ್ಯೆ ವೃದ್ಧ ಮೃತಪಟ್ಟಿದ್ದಾನೆ.

ಈಗ ವೃದ್ಧನ ಮೃತದೇಹದಿಂದ ಸ್ಯಾಂಪಲ್​ಗಳನ್ನು ಸಂಗ್ರಹಿಸಲಾಗಿದ್ದು, ಕೊರೊನಾ ಸೋಂಕು ಇದೆಯೋ?, ಇಲ್ಲವೋ ಎಂದು ಪತ್ತೆ ಹಚ್ಚಲಾಗುತ್ತಿದೆ. ಸ್ಥಳೀಯರ ಪ್ರಕಾರ ಆತ ಪ್ರಾಣಿಗಳಿಗೆ ಮೇವು ಒದಗಿಸುವ ಕೆಲಸ ಮಾಡುತ್ತಿದ್ದು, ಆರೋಗ್ಯವಾಗಿದ್ದ ಎಂದು ತಿಳಿದು ಬಂದಿದೆ. ಎರಡು ಮೂರು ಕಿಲೋಮೀಟರ್ ನಡೆದ ಕಾರಣದಿಂದ ಮೂರ್ಛೆ ಹೋಗಿರಬಹುದೆಂದು ಹೇಳಲಾಗುತ್ತಿದೆ.

ABOUT THE AUTHOR

...view details