ಕರ್ನಾಟಕ

karnataka

By

Published : Nov 5, 2019, 9:49 PM IST

Updated : Nov 5, 2019, 11:44 PM IST

ETV Bharat / bharat

ದಿನಗೂಲಿ ಆಗಿದ್ದ ತಂದೆಯನ್ನ​ ರಾತ್ರೋರಾತ್ರಿ ಕೋಟ್ಯಾಧಿಪತಿ ಮಾಡಿದ ಮಗ..! ಹೇಗೆ ಗೊತ್ತೆ?

ಉನಾ ಜಿಲ್ಲೆಯ ಚುರುಡು ಗ್ರಾಮದ ನಿವಾಸಿ ಸಂಜೀವ್ ಕುಮಾರ್ ಎಂಬುವವರು ತನ್ನ ಮಗನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಸ್​ ನಿಲ್ದಾಣದ ಬಳಿ ತಾನು ಹಾಗೂ ಮಗ ಒಂದು ಲಾಟರಿ ಟಿಕೆಟ್​ ಖರೀದಿಸಿದ್ದರು. ಮಗ ಖರೀದಿಸಿದ್ದ ಲಾಟರಿ ನಂಬರ್​ಗೆ ಪಂಜಾಬ್ ರಾಜ್ಯ ಮಹಾಲಕ್ಷ್ಮಿ ದೀಪಾವಳಿ ಪೂಜಾ ಬಂಪರ್ ಲಾಟರಿ ಅಡಿ 2.5 ಕೋಟಿ ರೂ. ಬಹುಮಾನ ಬಂದಿದೆ.

ಸಂಜೀವ್ ಕುಮಾರ್

ಉನಾ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಚುರುಡು ಗ್ರಾಮದ ನಿವಾಸಿ ಸಂಜೀವ್ ಕುಮಾರ್ ಎಂಬುವರು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ.

ಸಂಜೀವ್​ ಕುಮಾರ್ ಅವರು ಪಂಜಾಬ್ ರಾಜ್ಯ ಮಹಾಲಕ್ಷ್ಮಿ ದೀಪಾವಳಿ ಪೂಜಾ ಬಂಪರ್ ಲಾಟರಿಯನ್ನು ಗೆದ್ದಿದ್ದಾರೆ. ಕುಮಾರ್​ ನಿತ್ಯ ಪೆಯಿಂಟಿಂಗ್​, ಪ್ಲಂಬರ್ ಮತ್ತು ಎಲೆಕ್ಟ್ರಿಷನ್​ ಆಗಿ ಕೂಲಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಲಾಟರಿ ಖರೀದಿಸುವ ಹವ್ಯಾಸ ಇರಿಸಿಕೊಂಡಿದ್ದ ಈತ, ಒಂದಲ್ಲ ಒಂದು ದಿನ ತನ್ನ ಅದೃಷ್ಟ ಕೈಹಿಡಿಯಲಿದ ಎಂದು ನಂಬಿದ್ದ.

ಅಂತೆಯೇ, ಈ ವರ್ಷದ ದೀಪಾವಳಿಯಲ್ಲಿ ಭರ್ಜರಿ ಮೊತ್ತದ ಲಾಟರಿ ಹೊಡೆದಿದೆ. ಈ ಬಗ್ಗೆ ಈಟಿವಿ ಭಾರತ್​ ಜೊತೆಗೆ ಮಾತನಾಡಿರುವ ಸಂಜೀವ್​ ಕುಮಾರ್​, ನನ್ನ ಮಗನಿಗೆ ಚಂಡೀಗಢದ ಪಿಜಿಐ ವೈದ್ಯಕೀಯ ಸಂಸ್ಥೆಯಲ್ಲಿ ಚಿಕಿತ್ಸೆ ಕೊಡಿಸಿ ವಾಪಸ್​ ಆಗುತ್ತಿದ್ದೆ. ನಂಗಲ್ ಬಸ್ ನಿಲ್ದಾಣದ ಬಳಿ ಲಾಟರಿ ಅಂಗಡಿಯೊಂದನ್ನು ನೋಡಿ ನಾನು ಮತ್ತು ನನ್ನ ಮಗ ಒಂದು ಲಾಟರಿ ಖರೀದಿಸಿದ್ದೆವು.ಎ ಮತ್ತು ಬಿ ಸರಣಿಯ ಎರಡು ಲಾಟರಿ ಟಿಕೆಟ್‌ಗಳನ್ನು ಖರೀದಿಸಿದ್ದೆವು. ಈ ಲಾಟರಿ ಟಿಕೆಟ್‌ಗಳಲ್ಲಿ ನನ್ನ ಮಗ ಆಯ್ಕೆ ಮಾಡಿದ್ದ ಲಾಟರಿ ಟಿಕೆಟ್​ ನಂಬರ್​ಗೆ ಜಾಕ್‌ಪಾಟ್‌ ಹೊಡೆದಿದೆ. 2.5 ಕೋಟಿ ರೂ. ಲಾಟರಿ ಬಂದಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

Last Updated : Nov 5, 2019, 11:44 PM IST

ABOUT THE AUTHOR

...view details