ವಿಶ್ವಸಂಸ್ಥೆ :ದೆಹಲಿಯಲ್ಲಿ ಗಣರಾಜ್ಯೋತ್ಸವದ ವೇಳೆ ರೈತರ ಪ್ರತಿಭಟನೆ ಬಗ್ಗೆಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಪ್ರತಿಕ್ರಿಯಿಸಿ, ಅಹಿಂಸೆ ಮತ್ತು ಶಾಂತಿಯುತ ಪ್ರತಿಭಟನೆಗಳನ್ನು ಗೌರವಿಸುವಂತೆ ಕರೆ ನೀಡಿದ್ದಾರೆ.
ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದ ಯುಎನ್ ಪ್ರಧಾನ ಕಾರ್ಯದರ್ಶಿ
ದೆಹಲಿಯಲ್ಲಿ ರೈತರು ನಿನ್ನೆ ನಡೆಸಿದ ಟ್ರ್ಯಾಕ್ಟರ್ ಪರೇಡ್ ಸಂದರ್ಭದಲ್ಲಿ ದೆಹಲಿಯಲ್ಲಿನ ಅವ್ಯವಸ್ಥೆ ಬಗ್ಗೆ ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಪ್ರತಿಕ್ರಿಯಿಸಿ, ಅಹಿಂಸೆ ಮತ್ತು ಶಾಂತಿಯುತ ಪ್ರತಿಭಟನೆಗಳನ್ನು ಗೌರವಿಸುವಂತೆ ಕರೆ ನೀಡಿದ್ದಾರೆ.
ಜನರು ಶಾಂತಿಯುತವಾಗಿ ಪ್ರತಿಭಟನೆಗಳನ್ನು ನಡೆಸಬೇಕು ಹಾಗೂ ಸಭೆ ಸ್ವಾತಂತ್ರ್ಯ ಮತ್ತು ಅಹಿಂಸೆಯನ್ನು ಗೌರವಿಸುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ ಎಂದು ಗುಟೆರೆಸ್ ಅವರ ವಕ್ತಾರ ಸ್ಟೀಫನ್ ಡುಜಾರಿಕ್ ಮಂಗಳವಾರ ದೆಹಲಿಯ ಹಿಂಸಾಚಾರದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಿನ್ನೆ ನಡೆಸಿದ ಟ್ರ್ಯಾಕ್ಟರ್ ಪರೇಡ್ ಪ್ರತಿಭಟನೆಯು ಹಿಂಸಾತ್ಮಕರೂಪ ಪಡೆದು ಘಟನೆಯಲ್ಲಿ ಅನೇಕ ಪೊಲೀಸರು ರೈತರು ಗಾಯಗೊಂಡಿದ್ದಾರೆ. ಗಲಭೆಕೋರರು ಕೆಂಪು ಕೋಟೆಗೆ ನುಗ್ಗಿ ರಾಷ್ಟ್ರ ರಾಜಧಾನಿಯ ಹಲವಾರು ಸ್ಥಳಗಳಲ್ಲಿ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ.