ನವದೆಹಲಿ: ಕೃಷಿ ಮಸೂದೆಗಳ ಮಂಡನೆ ವೇಳೆ ದುರ್ವರ್ತನೆ ತೋರಿದ್ದಾರೆಂದು ಕಾರಣ ನೀಡಿ ರಾಜ್ಯಸಭೆ ಸ್ಪೀಕರ್ ಎಂ ವೆಂಕಯ್ಯನಾಯ್ಡು ಅವರು 8 ಮಂದಿ ರಾಜ್ಯಸಭಾ ಸದಸ್ಯರನ್ನು ಅಮಾನತು ಮಾಡಿದ್ದಾರೆ.
ಈ ಹಿಂದೆ ಅಮಾನತುಗೊಂಡ ಸಂಸದರು ಕುರಿತ ಮಾಹಿತಿ :
05.03.2020: ಸ್ಪೀಕರ್ ಟೇಬಲ್‌ನಿಂದ ಪತ್ರಿಕೆಗಳನ್ನು ಕಸಿದುಕೊಂಡು ಸದನದ ನಿಯಮಗಳನ್ನು ಸಂಪೂರ್ಣ ಕಡೆಗಣಿಸಿದ ಆರೋಪದ ಮೇಲೆ ಏಳು ಕಾಂಗ್ರೆಸ್ ಸಂಸದರನ್ನು ಬಜೆಟ್ ಅಧಿವೇಶನದ ಉಳಿದ ಅವಧಿವರೆಗೆ ಅಮಾನತುಗೊಳಿಸಲಾಗಿತ್ತು.
03.01.2019: ಕಾವೇರಿ ನದಿಗೆ ಅಣೆಕಟ್ಟು ಕಟ್ಟುವುದನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸದನದ ಬಾವಿಗಿಳಿದು ಬ್ಯಾನರ್ ಹಿಡಿದು ಪ್ರತಿಭಟಿಸಿ, ಘೋಷಣೆಗಳನ್ನು ಕೂಗಿದ ಹಿನ್ನೆಲೆ ಎಐಎಡಿಎಂಕೆ ಮತ್ತು ಟಿಡಿಪಿ ಸದಸ್ಯರುಗಳನ್ನ ಸ್ಪೀಕರ್ ಅಮಾನತುಗೊಳಿಸಿದ್ದರು. ನಿಯಮ 374 (ಎ) ಅಡಿಯಲ್ಲಿ 12 ಟಿಡಿಪಿ ಸಂಸದರು ಮತ್ತು ಏಳು ಎಐಎಡಿಎಂಕೆ ಸದಸ್ಯರನ್ನು ಸ್ಪೀಕರ್ ಅಮಾನತುಗೊಳಿಸಿದ್ದರು.
02.01.2019: ಕಾವೇರಿ ವಿಷಯದ ಬಗ್ಗೆ ಸದನದಲ್ಲಿ ನಿರಂತರವಾಗಿ ಪ್ರತಿಭಟನೆ ಮತ್ತು ಅಸಮಾಧಾನ ಹೊರ ಹಾಕಿದ್ದಕ್ಕಾಗಿ ಸ್ಪೀಕರ್ ಮಹಾಜನ್ ಸತತ ಐದು ಸಭೆಗಳಿಗೆ 24 ಎಐಎಡಿಎಂಕೆ ಸದಸ್ಯರನ್ನು ಅಮಾನತುಗೊಳಿಸಿದ್ದರು.
24.07.2017: ಗೋವಿನ ಹೆಸರಲ್ಲಿ ದಲಿತರು ಮತ್ತು ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಚರ್ಚಿಸಲು ಅನುಮತಿ ನೀಡದನ್ನು ವಿರೋಧಿಸಿ ಆರು ಕಾಂಗ್ರೆಸ್ ಲೋಕಸಭಾ ಸದಸ್ಯರು ಕಾಗದಗಳನ್ನು ಹರಿದು ಗಾಳಿಯಲ್ಲಿ ತೂರಿ ಮತ್ತು ಸ್ಪೀಕರ್ ಕಡೆಗೆ ಎಸೆದ ನಂತರ ಸತತ ಐದು ಸಭೆಗಳಿಗೆ ಅವರನ್ನು ಅಮಾನತುಗೊಳಿಸಲಾಗಿತ್ತು.
03.08.2015:ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ 25 ಕಾಂಗ್ರೆಸ್ ಸಂಸದರನ್ನು ಐದು ದಿನಗಳ ಕಾಲ ಅಮಾನತುಗೊಳಿಸಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ರಾಜೀನಾಮೆಗೆ ಒತ್ತಾಯಿಸಿ, ಸದನದ ಬಾವಿಗಿಳಿದು ಫಲಕಗಳು ಮತ್ತು ಘೋಷಣೆಗಳನ್ನು ಕೂಗುತ್ತಿದ್ದ 25 ಕಾಂಗ್ರೆಸ್ ಸದಸ್ಯರನ್ನು ಸ್ಪೀಕರ್ ಅಮಾನತುಗೊಳಿಸಿದ್ದರು.
13.02.2014: ಆಗಿನ ಸ್ಪೀಕರ್ ಮೀರಾ ಕುಮಾರ್ ಅವರು ಆಂಧ್ರಪ್ರದೇಶದ 18 ಸಂಸದರನ್ನು ಸದನದಲ್ಲಿ ಗದ್ದಲ ಮಾಡಿದಕ್ಕೆ ಅಮಾನತುಗೊಳಿಸಿದ್ದರು. ಅಮಾನತುಗೊಂಡ ಸಂಸದರು ತೆಲಂಗಾಣದ ಪ್ರತ್ಯೇಕ ರಾಜ್ಯ ರಚನೆಗೆ ಬೆಂಬಲ ನೀಡುತ್ತಿದ್ದರು ಜೊತೆಗೆ ವಿರೋಧಿಸುತ್ತಿದ್ದರು.
15.03.1989: ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ, 63 ಸದಸ್ಯರನ್ನು ಲೋಕಸಭೆಯಿಂದ ಮೂರು ದಿನಗಳವರೆಗೆ ಅಮಾನತುಗೊಳಿಸಿದ್ದರು. ಠಕ್ಕರ್ ಆಯೋಗದ ವರದಿಯ ಕುರಿತು ಸದನದಲ್ಲಿ ಗದ್ದಲ ಮಾಡಿದಕ್ಕೆ ಅಮಾನತುಗೊಳಿಸಲಾಗಿತ್ತು.