ವಾಷಿಂಗ್ಟನ್ (ಅಮೆರಿಕ): ಮಾರಕ ಕೊರೊನಾದಿಂದ ಮಹಿಳೆಯರನ್ನು ರಕ್ಷಿಸಿ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಒತ್ತಾಯಿಸಿದ್ದಾರೆ. ಕೊರೊನಾ ವಿರುದ್ಧ ವಿಶ್ವಸಂಸ್ಥೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಟ್ವಿಟರ್ನಲ್ಲಿ ಪ್ರಸ್ತಾಪಿಸಿದ ಅವರು ಮಹಿಳೆಯರನ್ನು ಕೊರೊನಾದಿಂದ ರಕ್ಷಿಸುವಂತೆ ದೇಶಗಳಿಗೆ ಮನವಿ ಮಾಡಿದ್ದಾರೆ.
ಶಾಂತಿಯೆಂದರೆ ಯುದ್ಧದ ಗೈರು ಮಾತ್ರವಲ್ಲ ಎಂದಿರುವ ಅವರು ಕೋವಿಡ್-19ನಿಂದ ವಿವಿಧ ರಾಷ್ಟ್ರಗಳಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು, ಇದರಿಂದ ಮಹಿಳೆಯರು ಸಾಕಷ್ಟು ತೊಂದರೆಗೆ ಒಳಗಾಗಿದ್ದು, ಹಿಂಸೆ ಅನುಭವಿಸುತ್ತಿದ್ದಾರೆ. ಅವರು ಮನೆಗಳಲ್ಲಿ ಸುರಕ್ಷಿತವಾಗಿರಬೇಕು. ಮಹಿಳೆಯರನ್ನು ರಕ್ಷಿಸುವ ಕೆಲಸವನ್ನು ಅಲ್ಲಿನ ಸರ್ಕಾರಗಳು ಮಾಡಬೇಕು ಎಂದು ಟ್ವಿಟರ್ನಲ್ಲಿ ಒತ್ತಾಯಿಸಿದ್ದಾರೆ.