ಕರ್ನಾಟಕ

karnataka

ETV Bharat / bharat

ಭಾರತ, ಚೀನಾ  ನಡುವೆ ಗರಿಷ್ಠ ಸಂಯಮ ಅಗತ್ಯ: ವಿಶ್ವಸಂಸ್ಥೆ

ಭಾರತ, ಚೀನಾ ಎರಡೂ ರಾಷ್ಟ್ರಗಳ ನಡುವೆ ಸದ್ಯದ ಪರಿಸ್ಥಿತಿಯಲ್ಲಿ ಗರಿಷ್ಠ ಸಂಯಮ ಅಗತ್ಯ ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟಾನಿಯೋ ಗುಟೆರಸ್​​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

UN Chief
ಅಂಟೋನಿಯೋ ಗುಟೆರಸ್

By

Published : Jun 17, 2020, 8:19 AM IST

ನ್ಯೂಯಾರ್ಕ್​ (ಅಮೆರಿಕ):ಭಾರತ - ಚೀನಾ ಸಂಘರ್ಷ ತಾರಕಕ್ಕೇರಿದೆ. ಪೂರ್ವ ಲಡಾಖ್​​ನಲ್ಲಿ ಭಾರತೀಯ ಸೇನೆ ಹಾಗೂ ಚೀನಾ ಸೇನೆ ನಡುವೆ ನಡೆದ ಸಂಘರ್ಷದಲ್ಲಿ ಒಬ್ಬ ಸೇನಾಧಿಕಾರಿ ಸೇರಿದಂತೆ ಮೂವರು ಯೋಧರು ಹುತಾತ್ಮರಾಗಿದ್ದಾರೆ ಎಂದು ಸೇನೆ ಸ್ಪಷ್ಟೀಕರಣ ನೀಡಿದೆ.

ಈ ಕುರಿತು ಮಾತನಾಡಿರುವ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರಸ್​​ ಎರಡೂ ರಾಷ್ಟ್ರಗಳ ನಡುವೆ ಗರಿಷ್ಠ ಸಂಯಮ ಅಗತ್ಯವಿದೆ ಎಂದಿದ್ದಾರೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್​ ಎರಿ ಕನೆಕೊ '' ನಮಗೆ ಚೀನಾ ಹಾಗೂ ಭಾರತದ ಬಗ್ಗೆ ಕಾಳಜಿಯಿದೆ. ಲೈನ್​ ಆಫ್​ ಆಕ್ಚುವಲ್ ಕಂಟ್ರೋಲ್​ನಲ್ಲಿ ಎರಡೂ ರಾಷ್ಟ್ರಗಳು ಸಂಯಮದಿಂದ ಇರಬೇಕು. ಎರಡೂ ರಾಷ್ಟ್ರಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ತೆಗೆದುಕೊಳ್ಳುತ್ತೇವೆ'' ಎಂದಿದ್ದಾರೆ.

ಮೇ 5ರಂದು ಮೊದಲ ಬಾರಿಗೆ ಸ್ವಲ್ಪ ಮಟ್ಟಿನ ಗೊಂದಲಗಳು ಚೀನಾ- ಭಾರತ ಗಡಿಯ ಪ್ಯಾಂಗ್​ಯಾಂಗ್ ಸೋ ಎಂಬಲ್ಲಿ ಕಾಣಿಸಿಕೊಂಡಿತ್ತು. ಅಲ್ಲಿಂದ ಶುರುವಾದ ಗೊಂದಲ ಮತ್ತೆ ಜೂನ್​ ತಿಂಗಳ ಮೊದಲ ವಾರದಲ್ಲಿ ಉಭಯ ರಾಷ್ಟ್ರಗಳ ನಡುವೆ ಕೆಲವೊಂದು ಮಾತುಕತೆಗಳಿಗೆ ಕಾರಣವಾಗಿತ್ತು. ಆದರೆ, ಮಾತುಕತೆಗಳ ನಂತರ ಯಾವುದೇ ನಿರ್ಣಯಕ್ಕೆ ಬರಲು ಎರಡೂ ರಾಷ್ಟ್ರಗಳಿಂದ ಸಾಧ್ಯವಾಗಿರಲಿಲ್ಲ. ಇದರ ಬೆನ್ನೆಲ್ಲೇ ಗಾಲ್ವಾನ್​ ಕಣಿವೆಯಲ್ಲಿ ಸಂಘರ್ಷ ಜರುಗಿದೆ.

ABOUT THE AUTHOR

...view details