ಕರ್ನಾಟಕ

karnataka

ETV Bharat / bharat

ದೆಹಲಿ ಗಲಭೆ ಪ್ರಕರಣ: ಅಪರಾಧ ವಿಭಾಗದ ಪೊಲೀಸರಿಂದ ಉಮರ್​ ಖಾಲಿದ್​ ಬಂಧನ - ಜೆಎನ್​ಯು ಹಳೆ ವಿದ್ಯಾರ್ಥಿ ಉಮರ್​ ಖಾಲಿದ್​ ಬಂಧನ

ಸಿಎಎ- ಪರ ವಿರೋಧ ಪ್ರತಿಭಟನೆ ವೇಳೆ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಜೆಎನ್​ಯು ಹಳೆ ವಿದ್ಯಾರ್ಥಿ ಉಮರ್​ ಖಾಲಿದ್​ ಬಂಧನವಾಗಿದೆ.

Umar Khalid arrested by delhi police crime branch
ಉಮರ್​ ಖಾಲಿದ್​ ವಶಕ್ಕೆ ಪಡೆದ ಅಪರಾಧ ವಿಭಾಗ

By

Published : Oct 1, 2020, 8:02 PM IST

ನವದೆಹಲಿ:ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎನ್‌ಯು ಹಳೆ ವಿದ್ಯಾರ್ಥಿ ಉಮರ್ ಖಾಲಿದ್​ನನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದು, ಮೂರು ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ.

ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮರ್​ ಖಾಲಿದ್​ನ್ನು ಕೆಲ ದಿನಗಳ ಹಿಂದೆ ದೆಹಲಿ ಪೊಲೀಸರ ವಿಶೇಷ ವಿಭಾಗ ಬಂಧಿಸಿ ವಿಚಾರಣೆ ನಡೆಸಿತ್ತು. ಇದಕ್ಕೂ ಮುನ್ನ ಹಲವು ಭಾರೀ ವಿಶೇಷ ವಿಭಾಗದ ಪೊಲೀಸರು ಉಮರ್​ ಖಾಲಿದ್​ನನ್ನು ವಿಚಾರಣೆಗೆ ಒಳಪಡಿಸಿದ್ದರು. ಕೆಲ ದಿನಗಳ ಹಿಂದೆಯಷ್ಟೆ ವಿಶೇಷ ವಿಭಾಗದ ಪೊಲೀಸರು ವಶಕ್ಕೆ ಪಡೆದು ಸತತ 11 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಇದೀಗ, ಅಪರಾಧ ವಿಭಾಗ ವಶಕ್ಕೆ ಪಡೆದಿದೆ.

ಗಲಭೆಗೆ ಪ್ರಚೋದಿಸಿದ ಆರೋಪ :

ಜೆಎನ್‌ಯು ಹಳೆ ವಿದ್ಯಾರ್ಥಿಯಾಗಿರುವ ಉಮರ್ ಖಾಲಿದ್, ಸಿಎಎ ವಿರೋಧಿ ಪ್ರತಿಭಟನೆಯ ಸಮಯದಲ್ಲಿ ಉದ್ರೇಕಾರಿ ಭಾಷಣಗಳನ್ನು ಮಾಡಿ ಗಲಭೆಗೆ ಪ್ರಚೋದಿಸಿದರು ಎಂಬ ಆರೋಪವಿದೆ. ಈ ನಿಟ್ಟಿನಲ್ಲಿ ವಿಶೇಷ ವಿಭಾಗ ಮತ್ತು ಅಪರಾಧ ವಿಭಾಗ ಖಾಲಿದ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ ಮತ್ತು ಸಾಕ್ಷ್ಯ ಸಂಗ್ರಹಿಸಲು ಫೋನ್ ವಶಪಡಿಸಿಕೊಂಡಿದೆ.

ABOUT THE AUTHOR

...view details