ಕರ್ನಾಟಕ

karnataka

ETV Bharat / bharat

ಹಥ್ರಾಸ್​ ಸಂತ್ರಸ್ತೆ ಕುಟುಂಬದ ಭೇಟಿಗೆ ಅವಕಾಶ ನೀಡಿ: ಯೋಗಿ ಸರ್ಕಾರದ ಬಳಿ ಉಮಾ ಭಾರತಿ ಮನವಿ!

ಹಥ್ರಾಸ್​ ಸಂತ್ರಸ್ತೆ ಕುಟುಂಬದವರನ್ನ ಭೇಟಿ ಮಾಡಲು ಅವಕಾಶ ನೀಡುವಂತೆ ಬಿಜೆಪಿ ಹಿರಿಯ ಮುಖಂಡೆ ಉಮಾ ಭಾರತಿ ಇದೀಗ ಮನವಿ ಮಾಡಿಕೊಂಡಿದ್ದಾರೆ.

By

Published : Oct 2, 2020, 10:51 PM IST

uma bharti
uma bharti

ಲಖನೌ:ಉತ್ತರ ಪ್ರದೇಶದ ಹಥ್ರಾಸ್​​ನಲ್ಲಿರುವ ನಡೆದಿರುವ ಅತ್ಯಾಚಾರ ಪ್ರಕರಣಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಅವರ ಕುಟುಂಬದವರನ್ನ ಭೇಟಿ ಮಾಡಲು ಇಲ್ಲಿಯವರೆಗೆ ಯಾರಿಗೂ ಅವಕಾಶ ನೀಡಿಲ್ಲ.

ಹಥ್ರಾಸ್​ ಅತ್ಯಾಚಾರ ಕೇಸ್​: ಎಸ್​​ಪಿ, ಡಿಎಸ್​ಪಿ,ಇನ್ಸ್​ಪೆಕ್ಟರ್​ ಸೇರಿ ಹಲವು ಅಧಿಕಾರಿಗಳು ಸಸ್ಪೆಂಡ್​​

ನಿನ್ನೆ ಸಂತ್ರಸ್ತೆ ಕುಟುಂಬ ಭೇಟಿ ಮಾಡಲು ತೆರಳುತ್ತಿದ್ದ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನ ನೋಯ್ಡಾ ಪೊಲೀಸರು ವಶಕ್ಕೆ ಪಡೆದುಕೊಂಡು ತದನಂತರ ದೆಹಲಿಗೆ ತೆರಳುವಂತೆ ಮನವಿ ಮಾಡಿದ್ದರು. ಇದೀಗ ಸಂತ್ರಸ್ತೆ ಕುಟುಂಬದ ಸದಸ್ಯರನ್ನ ಭೇಟಿ ಮಾಡಲು ಅವಕಾಶ ನೀಡುವಂತೆ ಬಿಜೆಪಿ ಹಿರಿಯ ಮುಖಂಡೆ ಉಮಾ ಭಾರತಿ ಮನವಿ ಮಾಡಿಕೊಂಡು ಟ್ವೀಟ್ ಮಾಡಿದ್ದಾರೆ. ರಾಜಕಾರಣಿಗಳು, ಮಾಧ್ಯಮದವರು ಸಂತ್ರಸ್ತೆ ಕುಟುಂಬ ಭೇಟಿ ಮಾಡಲು ಅವಕಾಶ ನೀಡುವಂತೆ ಅವರು ಮನವಿ ಮಾಡಿ ಟ್ವೀಟ್​ ಮಾಡಿದ್ದಾರೆ.

ಉಮಾ ಭಾರತಿ ಟ್ವೀಟ್​

ಯವತಿ ದಲಿತ ಕುಟುಂಬಕ್ಕೆ ಸೇರಿದವಳಾಗಿದ್ದಾಳೆ. ಆತುರದಲ್ಲಿ ಪೊಲೀಸರು ಆಕೆಯ ಅತ್ಯಕ್ರಿಯೆ ನಡೆಸಿದ್ದು, ಇದೀಗ ಆಕೆಯ ಕುಟುಂಬಸ್ಥರಿಗೆ ನಿರ್ಬಂಧ ಹೇರಲಾಗಿದೆ. ಎಸ್​ಐಟಿಯಿಂದ ತನಿಖೆ ನಡೆಯುತ್ತಿರುವ ವೇಳೆ ಅವರ ಮೇಲೆ ನಿರ್ಬಂಧ ಹೇರಿರುವ ಯಾವುದೇ ನಿಯಮದ ಬಗ್ಗೆ ನನಗೆ ಗೊತ್ತಿಲ್ಲ. ನೀವೂ ತುಂಬಾ ಪ್ರಾಮಾಣಿಕ ವ್ಯಕ್ತಿ ಎಂಬುದು ನನಗೆ ಗೊತ್ತಿದೆ. ಸಂತ್ರಸ್ತೆ ಭೇಟಿ ಮಾಡಲು ಮಾಧ್ಯಮದವರಿಗೆ ಹಾಗೂ ರಾಜಕೀಯ ಮುಖಂಡರು ಸೇರಿ ಇತರರಿಗೆ ಅವಕಾಶ ನೀಡುವಂತೆ ಮನವಿ ಮಾಡಿ ಟ್ವೀಟ್​ ಮಾಡಿದ್ದಾರೆ.

ABOUT THE AUTHOR

...view details