ಪನ್ನಾ (ಮಧ್ಯಪ್ರದೇಶ): ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿ ಅವರು ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಮಹಮ್ಮದ್ ಅಲಿ ಜಿನ್ನಾ ಅವರಿಗೆ ಹೋಲಿಸಿ, 'ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ' ಎಂದು ಟೀಕಿಸಿದ್ದಾರೆ.
ಪನ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಸದಾಗಿ ಜಾರಿಗೆ ಬಂದ ಕಾನೂನು ಭಾರತೀಯ ನಾಗರಿಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅದು ಉಮಾ ಭಾರತಿ ಅಥವಾ ಓವೈಸಿ ಆಗಿರಲಿ, ಯಾರಿಗೂ ಯಾವುದೇ ರೀತಿಯ ತೊಂದರೆ ಕೊಡುವುದಿಲ್ಲ. ಯಾರ ಹಕ್ಕುಗಳನ್ನು ಅದು ಕಸಿದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪನ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಉಮಾಭಾರತಿ ಆದರೆ, ಕೆಲವು ದುಷ್ಟ ಮನಸ್ಸಿನ ಜನರು ವದಂತಿಗಳನ್ನು ಹರಡುತ್ತಿದ್ದಾರೆ. ಇಂತಹ ವದಂತಿಗಳು ಭಾರತ ವಿಭಜನೆಗೊಳ್ಳಲು ಕಾರಣವಾಗುತ್ತೆ ಎಂದರು.
ಈ ಹಿಂದೆ ದೇಶ ವಿಭಜನೆಯಿಂದ ಯಾರೂ ಪ್ರಯೋಜನ ಪಡೆಯಲಿಲ್ಲ. ಆದರೆ, ಜಿನ್ನಾ ಅವರಂತಹ ಜನರು ಅದರಿಂದ ಹೊರಹೊಮ್ಮಿದರು. ಇಂದು ನಮ್ಮ ನಡುವೆ ಜಿನ್ನಾ ಇಲ್ಲ. ಆದರೆ, ರಾಹುಲ್ ಜಿನ್ನಾ ಮತ್ತು ಪ್ರಿಯಾಂಕಾ ಜಿನ್ನಾ ಅವರು ಈಗಿನ ವಾತಾವರಣಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಮುಸ್ಲಿಮರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಸೋನಿಯಾ ಗಾಂಧಿಯ ತಂದೆ ಇಟಲಿಯ ಮುಸೊಲಿನಿ ಸೈನ್ಯದಲ್ಲಿ ಸೈನಿಕ ಎಂದು ಯಾರಾದರೂ ಹೇಳಿದ್ದೀರಾ? ಅವಳು ನಮ್ಮ ಸೊಸೆ ಆಗಿರುವುದರಿಂದ ನಾವು ಅವಳನ್ನು ಗೌರವಿಸುತ್ತೇವೆ. ನಾವು ನಿಮ್ಮ ಬಗ್ಗೆ ಏನೂ ಕೇಳದಿದ್ದಾಗಲೂ (ನಿಮ್ಮ ಪೌರತ್ವದ ಬಗ್ಗೆ), ಭಾರತದ ಮುಸ್ಲಿಮರನ್ನು ಏಕೆ ಪ್ರಶ್ನಿಸಲಾಗುತ್ತದೆ ಎಂದು ಉಮಾಭಾರತಿ ಕಿಡಿಕಾರಿದರು.