ನ್ಯಾನ್: ಇಂಗ್ಲಿಷ್ ಪ್ರೀಮಿಯರ್ ಲೀಗ್ ಚಾಂಪಿಯನ್ ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಕ್ಲಬ್ ಚಾಂಪಿಯನ್ಸ್ ಲೀಗ್ನ ಮುಂಬರುವ ಎರಡು ಸೀಸನ್ಗಳಲ್ಲಿ ಭಾಗವಹಿಸುವುದಂತೆ ಯುಇಎಫ್ಎ(UEFA) ನಿಷೇಧಿಸಿದೆ.
ಪ್ರಾಯೋಜಕತ್ವದ ಆದಾಯ ವಿಷಯದಲ್ಲಿನಿಯಮ ಉಲ್ಲಂಘಿಸಿದ್ದಕ್ಕಾಗಿ ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಷನ್ಸ್(UEFA) ಈ ಕ್ರಮ ಕೈಗೊಂಡಿದ್ದು, MCFCಗೆ 30 ಮಿಲಿಯನ್ ಯುರೋಗಳಷ್ಟು (33 ಮಿಲಿಯನ್ ಅಮೆರಿಕನ್ ಡಾಲರ್) ದಂಡ ವಿಧಿಸಿದೆ. ಭಾರತೀಯ ಲೆಕ್ಕದಲ್ಲಿ ಇದು ಸುಮಾರು 232.4 ಕೋಟಿ ರೂ. ಆಗುತ್ತದೆ.
ಈ ಎಲ್ಲಾ ಸಾಕ್ಷ್ಯಾದಾರಗಳನ್ನು ಗಮನಿಸಿದ ತೀರ್ಪುಗಾರರು ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಕ್ಲಬ್ ಯುಇಎಫ್ಎ ಕ್ಲಬ್ ಪರವಾನಗಿ ಮತ್ತು ಹಣಕಾಸಿನ ನ್ಯಾಯೋಚಿತ ಆಟದ ನಿಯಮಗಳನ್ನು ಉಲ್ಲಂಘನೆ ಮಾಡಿ ಪ್ರಾಯೋಜಕತ್ವದ ಆದಾಯವನ್ನು ಹೆಚ್ಚಿಸಿಕೊಡಿದೆ. ಅಲ್ಲದೆ 2012 ರಿಂದ 2016ವರೆಗೆ ಯುಇಎಫ್ಎಗೆ ಸಲ್ಲಿಸಿದ್ದ ಮಾಹಿತಿಯಲ್ಲಿ ನಿಯಮ ಉಲ್ಲಂಘನೆ ಮಾಡಿರುವುದು ಕಂಡುಬಂದಿದೆ.