ಲಖ್ನೌ: ಉತ್ತರ ಪ್ರದೇಶದಲ್ಲಿ ಫಿಲ್ಮಿ ಸಿಟಿ ನಿರ್ಮಾಣ ಮಾಡುವುದಾಗಿ ಘೋಷಿಸಿದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಪ್ರಸಿದ್ಧ ಗಾಯಕ ಉದಿತ್ ನಾರಾಯಣ್ ಅವರು 'ಲಗಾನ್' ಸಿನಿಮಾದ ಹಾಡೊಂದನ್ನು ಅರ್ಪಿಸಿದ್ದಾರೆ.
ಗಣ್ಯರು ಭಾಗವಹಿಸಿದ್ದ ಸಭೆಯಲ್ಲಿ ಬಾಲಿವುಡ್ ಗಾಯಕ ಉದಿತ್ ನಾರಾಯಣ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿ ಬಾಲಿವುಡ್ನ 'ಲಗಾನ್' ಸಿನಿಮಾದ 'ಮಿತ್ವಾ' ಗೀತೆಯ ಮಧ್ಯದ ಚರಣವನ್ನು ಹಾಡಿದ್ದಾರೆ.
ಉದಿತ್ ನಾರಾಯಣ್ ಹಾಡಿದ ವಿಡಿಯೋ ಕ್ಲಿಪಿಂಗ್ ಅನ್ನು ವಿಶಾಕ್ ಕೊಯಿಪ್ಪುರಥು ಎಂಬುವವರು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. 'ಯೋಗಿ ಕಹೆ ಸಚ್ ಔರ್ ಸಾಹಸ್ ಹೈ ಜಿಸ್ಕೆ ಮನ್ ಮೇ, ಆಂತ್ ಮೇ ಜೀತ್ ಹುಸಿಕಿ ರಹೆ' (ಯೋಗಿ ಹೇಳುತ್ತಾರೆ ಮನಸ್ಸಿನಲ್ಲಿ ಸತ್ಯ ಮತ್ತು ಧೈರ್ಯವನ್ನು ಹೊಂದಿರುವ ವ್ಯಕ್ತಿ ಅಂತಿಮವಾಗಿ ಗೆಲ್ಲುತ್ತಾನೆ) ಎಂದು ಹಾಡಿದ್ದಾರೆ.