ಉಧಂಪುರ (ಜಮ್ಮು ಕಾಶ್ಮೀರ):ಉಧಂಪುರದ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಸರ್ಮೋಲಿ ಬಳಿ ಆರ್ಮಿ ಟ್ರಕ್ ಸ್ಕಿಡ್ ಆಗಿ ಉರುಳಿ ಬಿದ್ದ ಪರಿಣಾಮ ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಅವರನ್ನ ಚಿಕಿತ್ಸೆಗಾಗಿ ಸೇನಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಕಿಡ್ ಆಗಿ ಉರುಳಿ ಬಿದ್ದ ಸೇನಾ ಟ್ರಕ್: ಇಬ್ಬರು ಯೋಧರಿಗೆ ಗಂಭೀರ ಗಾಯ - ಉಧಂಪುರ ಸುದ್ದಿ
ಸೇನಾ ವಾಹನವೊಂದು ಸ್ಕಿಡ್ ಆಗಿ ಉರುಳಿಬಿದ್ದ ಪರಿಣಾಮ ಇಬ್ಬರು ಯೋಧರು ಗಾಯಗೊಂಡಿರುವ ಘಟನೆ ನಡೆದಿದ್ದು, ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Army men injured after truck skids
ಇದಕ್ಕೆ ಸಂಬಂಧಿಸಿದಂತೆ ಉಧಂಪುರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದು, ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸೇನಾ ವಾಹನ ಆಯಾತಪ್ಪಿ ಉರುಳಿಬಿದ್ದ ಕಾರಣ ಸೇನಾ ಸಿಬ್ಬಂದಿ ನಾಯಕ್ ಪನ್ವಾರ್ ಮತ್ತು ಸುರೇಶ್ ಸಾಬರ್ ಗಾಯಗೊಂಡಿದ್ದಾಗಿ ಮಾಹಿತಿ ನೀಡಿದ್ದಾರೆ.
ಸೇನಾ ವಾಹನ ಉಧಂಪುರದಿಂದ ಶ್ರೀನಗರಕ್ಕೆ ತೆರಳುತ್ತಿತ್ತು. ವಾಹನ ಉರುಳಿಬಿದ್ದ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಹಾಗೂ ಗಾಯಗೊಂಡ ಇಬ್ಬರು ಸೇನಾ ಸಿಬ್ಬಂದಿಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.