ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್​​ ಮಿತ್ರಪಕ್ಷದಿಂದ ಸಿಎಎಗೆ ಬೆಂಬಲ: ಎನ್​​ಆರ್​​ಸಿಗೆ ವಿರೋಧ- ಇದು ಈ ಸರ್ಕಾರದ ಗೊಂದಲ ನೀತಿ?

ಮಹಾರಾಷ್ಟ್ರದ ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿರುವ ಉದ್ಧವ್ ಠಾಕ್ರೆ ಸಾಮ್ನಾ ಪತ್ರಿಕೆಯ ಸಂದರ್ಶನದಲ್ಲಿ ಸಿಎಎಗೆ ಬೆಂಬಲ ನೀಡುತ್ತೇನೆ, ಆದರೆ ಆದರೆ ಎನ್​​ಆರ್​ಸಿಯನ್ನು ವಿರೋಧಿಸುತ್ತೇನೆ ಎಂದು ಘೋಷಿಸಿದ್ದಾರೆ.

Uddhav Thackeray
Uddhav Thackeray

By

Published : Feb 3, 2020, 8:04 AM IST

ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದ ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿರುವ ಉದ್ಧವ್ ಠಾಕ್ರೆ ಸಾಮ್ನಾ ಪತ್ರಿಕೆಯ ಸಂದರ್ಶನದಲ್ಲಿ ಸಿಎಎಗೆ ಬೆಂಬಲ ನೀಡುತ್ತೇನೆ, ಆದರೆ ಎನ್​​ಆರ್​ಸಿಯನ್ನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ.

ಶಿವಸೇನೆಯ ಮುಖವಾಣಿವಾಗಿರುವ ಸಾಮ್ನಾ ಪತ್ರಿಕೆಯ ಸಂಪಾದಕ ಸಂಜಯ್ ರಾವುತ್​​ ನಡೆಸಿದ ಸಂದರ್ಶನದಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ನಾನು ಬೆಂಬಲಿಸಿದ್ದೇನೆ. ಆದರೆ ಎನ್​​ಆರ್​ಸಿ ಜಾರಿಯಾದರೆ, ಮುಸ್ಲಿಮರಿಗೆ ಮಾತ್ರವಲ್ಲದೇ ಹಿಂದೂಗಳಿಗೂ ತೊಂದರೆಯಾಗಲಿದೆ ಅದಕ್ಕಾಗಿ ರಾಜ್ಯದಲ್ಲಿ ಎನ್‌ಆರ್‌ಸಿಯನ್ನು ಜಾರಿಗೆ ತರುವುದಿಲ್ಲ ಎಂದು ಹೇಳಿದ್ದಾರೆ.

ಸಿಎಎ ಯಾರನ್ನೂ ದೇಶದಿಂದ ಹೊರಗೆ ಎಸೆಯುವ ಕಾನೂನು ಅಲ್ಲ. ನಾಗರಿಕರ ರಾಷ್ಟ್ರೀಯ ದಾಖಲೆಯ ಪ್ರಕಾರ, ಮುಸ್ಲಿಮರಿಗೆ ಮಾತ್ರವಲ್ಲ, ಹಿಂದೂಗಳಗೂ ಅವರ ಪೌರತ್ವವನ್ನು ಸಾಬೀತುಪಡಿಸುವುದು ಕಷ್ಟವಾಗುತ್ತದೆ. ಹಾಗಾಗಿ ಎನ್‌ಆರ್‌ಸಿ ಮಹಾರಾಷ್ಟ್ರಕ್ಕೆ ಬರಲು ನಾನು ಬಿಡುವುದಿಲ್ಲ ಎಂದು ಠಾಕ್ರೆ ಹೇಳಿದ್ದಾರೆ ಎಂದು ಸ್ಪಷ್ಟ ಪಡಿಸಿದ್ದಾರೆ.

For All Latest Updates

ABOUT THE AUTHOR

...view details