ಮುಂಬೈ:ಮಹಾರಾಷ್ಟ್ರದಲ್ಲಿ ಜಾತಿ ಆಧಾರಿತ ಜನಗಣತಿ ಕೋರಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ನಿಯೋಗ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಲಿದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಜಾತಿ ಆಧಾರಿತ ಜನಗಣತಿಗೆ ಆಗ್ರಹಿಸಿ ಸಿಎಂ ಉದ್ಧವ್ ಠಾಕ್ರೆ ನಿಯೋಗದಿಂದ ಅಮಿತ್ ಶಾ ಭೇಟಿ - ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
ಮಹಾರಾಷ್ಟ್ರದಲ್ಲಿ ಜಾತಿ ಆಧಾರಿತ ಜನಗಣತಿ ಕೋರಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ನಿಯೋಗ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಲಿದೆ.

ಹಿಂದುಳಿದ ಸಮುದಾಯಗಳಿಗೆ ಪರಿಣಾಮಕಾರಿ ಕಲ್ಯಾಣ ಯೋಜನೆಗಳನ್ನು ಜಾರಿಗೆ, ಇತರ ಹಿಂದುಳಿದ ವರ್ಗಗಳ (ಒಬಿಸಿ) ನಿಖರವಾದ ಜನಸಂಖ್ಯೆಯನ್ನು ಲೆಕ್ಕಹಾಕಲು ಜಾತಿ ಆಧಾರಿತ ಜನಗಣತಿ ಜಾರಿಗೆ ಒತ್ತಾಯಿಸಲಾಗುವುದು. ಉತ್ತಮ ಮತ್ತು ಪರಿಣಾಮಕಾರಿ ಯೋಜನೆಗಾಗಿ, ಜಾತಿ ಆಧಾರಿತ ಜನಗಣತಿಯನ್ನು ಒಬಿಸಿ ಜನಸಂಖ್ಯೆಯನ್ನು ಲೆಕ್ಕಹಾಕಲು ಆಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಫೆಬ್ರವರಿ 18ರಂದು ಒಡಿಶಾ ವಿಧಾನಸಭೆ ಒಡಿಶಾ ರಾಜ್ಯ ಹಿಂದುಳಿದ ವರ್ಗಗಳ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿತ್ತು. ಒಡಿಶಾ ಮತ್ತು ಬಿಹಾರದ ನಂತರ ಜಾತಿ ಆಧಾರಿತ ಜನಗಣತಿಯನ್ನು ಬೆಂಬಲಿಸುವ ಮೂರನೇ ರಾಜ್ಯವಾಗಿ ಮಹಾರಾಷ್ಟ್ರ ಮಾರ್ಪಡಲಿದೆ.