ಕರ್ನಾಟಕ

karnataka

ETV Bharat / bharat

50-50 ಫಾರ್ಮುಲಾಗೆ ಒಪ್ಪದ ಫಡ್ನವೀಸ್​, ಯೋಜಿತ ಸಭೆ ರದ್ದುಗೊಳಿಸಿದ ಶಿವಸೇನೆ

"50-50 ಫಾರ್ಮುಲಾಗೆ ದೇವೇಂದ್ರ ಫಡ್ನವೀಸ್ ಒಪ್ಪಿಲ್ಲ ಎನ್ನುವುದಾದರೆ, ನಾವು ಅವರ ಜೊತೆ ಮಾತನಾಡುವುದೇನಿದೆ? ಮುಂದೆ ಚರ್ಚೆ ನಡೆಸುವಂತಹ ವಿಚಾರವಾದರೂ ಏನಿದೆ? ಹೀಗಾಗಿ ಇಂದು 4 ಗಂಟೆಗೆ ಯೋಜಿಸಿದ್ದ ಚರ್ಚೆಯನ್ನು ಉದ್ಧವ್​ ಠಾಕ್ರೆ ರದ್ದುಪಡಿಸಿದರು: ಸಂಜಯ್​ ರಾವತ್‌

ಸಭೆ ರದ್ದುಗೊಳಿಸಿದ ಶಿವಸೇನ

By

Published : Oct 29, 2019, 5:05 PM IST

ಮುಂಬೈ: ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದು ಒಂದು ವಾರವಾಗುತ್ತಾ ಬಂದರೂ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತು ಇನ್ನೂ ಅಂತ್ಯಕಂಡಿಲ್ಲ.

50-50 ನಿಯಮದಂತೆ ಸರ್ಕಾರ ರಚನೆಯಾಗುತ್ತೆ ಎಂಬುದಾಗಿ ಬಿಜೆಪಿ ಹಾಗೂ ಶಿವಸೇನ ನಡುವೆ ಮಾತುಕತೆ ನಡೆದಿತ್ತು. ಆದರೆ ಇದೀಗ ಹಾಲಿ ಸಿಎಂ ದೇವೇಂದ್ರ ಫಡ್ನವೀಸ್​​ ಯು ಟರ್ನ್​ ಹೊಡೆದಿದ್ದು, ನಾನು 50-50 ಫಾರ್ಮುಲಾ ಬಗ್ಗೆ ಮಾತನಾಡಿಲ್ಲ. ನನ್ನ ಮುಂದೆ ಈ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಅಮಿತ್​ ಶಾ ಹಾಗೂ ಉದ್ಧವ್​ ಠಾಕ್ರೆಯವರಿಗೆ ಮಾತ್ರ ಈ ನಿರ್ಧಾರದ ಬಗ್ಗೆ ತಿಳಿದಿದ್ದರೆ ಅವರೇ ಈ ಬಗ್ಗೆ ನಿರ್ಧರಿಸುತ್ತಾರೆ ಎಂದು ಫಡ್ನವೀಸ್​ ಹೇಳಿದ್ದಾರೆ.

ಸಭೆ ರದ್ದು

ಈ ಬಗ್ಗೆ ಪ್ರತಿಕ್ರಿಯೆ ನೀಡಿದರೂ ಶಿವಸೇನ ನಾಯಕ ಸಂಜಯ್​ ರಾವತ್‌​, ಖುದ್ದು ದೇವೇಂದ್ರ ಫಡ್ನವೀಸ್ 50-50 ಫಾರ್ಮುಲಾ ಬಗ್ಗೆ ಶಾ ಹಾಗೂ ಠಾಕ್ರೆ ​ಮುಂದೆ ಉಚ್ಛರಿಸಿದ್ದರು. ಈಗ ಅವರು ಕ್ಯಾಮರಾ ಮುಂದೆ ಹೇಳಿದ ಮಾತುಗಳನ್ನು ಒಪ್ಪಲು ನಿರಾಕರಿಸುತ್ತಿದ್ದಾರೆ. ಈಗ ಅವರು, ತಾನು 50-50 ಫಾರ್ಮುಲಾಗೆ ಒಪ್ಪಿಲ್ಲ ಎನ್ನುವುದಾದರೆ ನಾವು ಅವರ ಜೊತೆ ಮಾತನಾಡುವುದೇನಿದೆ? ಮುಂದೆ ಚರ್ಚೆ ನಡೆಸುವಂತಹ ವಿಚಾರವಾದರೂ ಏನಿದೆ? ಹೀಗಾಗಿ ಇಂದು 4 ಗಂಟೆಗೆ ಯೋಜಿಸಿದ್ದ ಚರ್ಚೆಯನ್ನು ಉದ್ಧವ್​ ಠಾಕ್ರೆ ರದ್ದುಪಡಿಸಿದ್ದಾರೆ ಎಂದು ಸಂಜಯ್​ ಹೇಳಿದ್ದಾರೆ.

288 ಕ್ಷೇತ್ರಗಳ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 105, ಶಿವಸೇನ 56, ಕಾಂಗ್ರೆಸ್ 44 ಹಾಗೂ ಎನ್​ಸಿಪಿ 54 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಬಿಜೆಪಿ-ಶಿವಸೇನ ಮತ್ತು ಕಾಂಗ್ರೆಸ್-ಎನ್​ಸಿಪಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದವು. ಹೀಗಾಗಿ 50-50 ಫಾರ್ಮುಲಾಗೆ ಶಿವಸೇನೆ ಬೇಡಿಕೆ ಇಟ್ಟಿತ್ತು.

ABOUT THE AUTHOR

...view details