ಕರ್ನಾಟಕ

karnataka

ETV Bharat / bharat

600 ಜನ ಉದ್ಯೋಗಿಗಳನ್ನು ತೆಗೆದುಹಾಕಲು ಉಬರ್​ ನಿರ್ಧಾರ!

ಕೋವಿಡ್​-19 ರ ಪರಿಣಾಮದಿಂದಾಗಿ ಉಬರ್ ಇಂಡಿಯಾ ಸಹ ಉದ್ಯೋಗಿಗಳನ್ನು ತೆಗೆದುಹಾಕಲು ಮುಂದಾಗಿದೆ. ಇರುವ ಉದ್ಯೋಗಿಗಳ ಗಾತ್ರವನ್ನು ಕಡಿಮೆ ಮಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲದಂತಾಗಿದೆ ಎಂದು ಉಬರ್‌ ಭಾರತ ಮತ್ತು ದಕ್ಷಿಣ ಏಷ್ಯಾ ವ್ಯವಹಾರಗಳ ಅಧ್ಯಕ್ಷ ಪ್ರದೀಪ್ ಪರಮೇಶ್ವರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Uber India
ಉದ್ಯೋಗಿಗಳನನ್ನು ವಜಾಗೊಳಿಸಲು ಊಬರ್​ ನಿರ್ಧಾರ

By

Published : May 26, 2020, 2:28 PM IST

ದೆಹಲಿ:ಕೊರೊನಾ ವೈರಸ್​ನಿಂದಾಗಿ ಸುಮಾರು 600 ಜನ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಾಗಿ ಉಬರ್ ಇಂಡಿಯಾ ಮಂಗಳವಾರ ತಿಳಿಸಿದೆ.

ಕೆಲವೊಂದು ಸಂದರ್ಭದಲ್ಲಿ ನೌಕರರು, ಚಾಲಕ ಮತ್ತು ಸವಾರರ ಜೊತೆ ಸಂಪರ್ಕ ಹೊಂದಿರುತ್ತಾರೆ ಎಂದು ಉಬರ್‌ನ ಭಾರತ ಮತ್ತು ದಕ್ಷಿಣ ಏಷ್ಯಾ ವ್ಯವಹಾರಗಳ ಅಧ್ಯಕ್ಷ ಪ್ರದೀಪ್ ಪರಮೇಶ್ವರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊವಿಡ್​-19 ರ ಪರಿಣಾಮದಿಂದಾಗಿ ಉಬರ್ ಇಂಡಿಯಾ ತನ್ನ ಉದ್ಯೋಗಿಗಳ ಗಾತ್ರವನ್ನು ಕಡಿಮೆ ಮಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲದಂತಾಗಿದೆ. ಚಾಲಕ, ಸವಾರರ ಬೆಂಬಲ ಮತ್ತು ಇತರೆ ಕಾರ್ಯಗಳಿಂದಾಗಿ ಸುಮಾರು 600 ನೌಕರರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಇದು ತಿಂಗಳ ಹಿಂದೆ ಘೋಷಿಸಲಾದ ಜಾಗತಿಕ ಉದ್ಯೋಗ ಕಡಿತದ ಭಾಗವಾಗಿದೆ ಎಂದು ಪರಮೇಶ್ವರನ್ ತಿಳಿಸಿದ್ದಾರೆ.

ABOUT THE AUTHOR

...view details