ಬಿಹಾರ :ಮಂಜರ್ ಕುಂಡ್‌ನಲ್ಲಿರುವ ಜಲಪಾತವೊಂದರಲ್ಲಿ ಸ್ನಾನ ಮಾಡಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಸಿಲುಕಿ, ಹೊರಬರಲು ಒದ್ದಾಡಿರುವ ಘಟನೆ ನಡೆದಿದೆ.
ಜಲಪಾತದಲ್ಲಿ ದಿಢೀರ್ ನೀರಿನ ಹರಿವು ಹೆಚ್ಚಳ; ಪ್ರಾಣಾಪಾಯದಿಂದ ಯುವಕರ ರಕ್ಷಣೆ - ಪೊಲೀಸರಿಂದ ರಕ್ಷಣೆ
ಜಲಪಾತವೊಂದರಲ್ಲಿ ಸ್ನಾನ ಮಾಡಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಸಿಲುಕಿ ಹೊರಬರಲು ಒದ್ದಾಡಿದ್ದಾರೆ. ಬಳಿಕ ಪೊಲೀಸರು ಸ್ಥಳೀಯರ ಸಹಾಯದಿಂದ ಅವರನ್ನು ರಕ್ಷಿಸಿದ್ದಾರೆ.
ಜಲಪಾತದಲ್ಲಿ ಸಿಲುಕಿದ ಯುವಕರು
ನೀರಿನ ಹರಿವು ಹೆಚ್ಚಿದ್ದರಿಂದ ಯುವಕರಿಬ್ಬರೂ ಹಲವು ಗಂಟೆಗಳ ಕಾಲ ನೀರಿನಲ್ಲಿಯೇ ಸಿಲುಕಿಕೊಂಡಿದ್ದರು. ಬಳಿಕ ದಾರಿಗವ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಸ್ಥಳೀಯರ ಸಹಾಯದಿಂದ ಯುವಕರನ್ನು ಪ್ರಾಣಾಪಾಯದಿಂದ ರಕ್ಷಣೆ ಮಾಡಿದ್ದಾರೆ.
ಈ ಯುವಕರು ಸಸಾರಂ ನಿವಾಸಿಗಳಾಗಿದ್ದು, ಮಂಜರ್ ಕುಂಡ್ನ ಜಲಪಾತಕ್ಕೆ ಬಂದಿದ್ದರು. ಈ ವೇಳೆ ದಿಢೀರ್ ಮಳೆಯಾಗಿ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹೀಗಾಗಿ ಯುವಕರಿಬ್ಬರೂ ನೀರಿನಲ್ಲಿ ಸಿಲುಕಿಕೊಂಡಿದ್ದರು.