ಔರಂಗಾಬಾದ್(ಮಹಾರಾಷ್ಟ್ರ): ಔರಂಗಾಬಾದ್‌ನ ಆಜಾದ್ ಚೌಕ್‌ನಲ್ಲಿ ಇಬ್ಬರು ಅನ್ಯ ಕೋಮಿನ ಯುವಕರ ಮೇಲೆ 'ಜೈ ಶ್ರೀ ರಾಮ್' ಹೇಳುವಂತೆ ನಾಲ್ವರು ಅಪರಿಚಿತರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
'ಜೈ ಶ್ರೀ ರಾಮ್' ಹೇಳುವಂತೆ ಇಬ್ಬರು ಯುವಕರ ಮೇಲೆ ದೌರ್ಜನ್ಯ ಆರೋಪ - ಚಿರಂಜೀವಿ ಪ್ರಸಾದ್
ಮಹಾರಾಷ್ಟ್ರದಲ್ಲಿ ಇಬ್ಬರು ಯುವಕರ ಮೇಲೆ ದೌರ್ಜನ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಜೈ ಶ್ರೀ ರಾಮ್ ಪಠಿಸುವಂತೆ ದುಷ್ಕಿರ್ಮಿಗಳು ಒತ್ತಡ ಹೇರಿದ್ದಾರೆ ಎನ್ನಲಾಗ್ತಿದೆ. ಈ ಘಟನೆ ಕುರಿತು ಎಫ್ಐಆರ್ ದಾಖಲಾಗಿದೆ.
ದೌರ್ಜನ್ಯ
ಈ ಘಟನೆ ಸಂಬಂಧ ಪೊಲೀಸ್ ಆಯುಕ್ತ ಚಿರಂಜೀವಿ ಪ್ರಸಾದ್ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿದ್ದು, ಘಟನೆಯ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಈ ಪ್ರಕರಣ ಭಾನುವಾರ ನಡೆದಿದೆ.ವದಂತಿಗಳಿಗೆ ಜನರು ಕಿವಿಗೊಡಬೇಡಿ ಎಂದು ಪೊಲೀಸ್ ಆಯುಕ್ತರು ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ.
ದೌರ್ಜನ್ಯಕ್ಕೆ ಒಳಗಾದ ಅಮೀರ್ ಶೇಖ್ ಮಾತನಾಡಿ "ನನ್ನ ಸ್ನೇಹಿತನೊಂದಿಗೆ ಆಜಾದ್ ಚೌಕ್‌ನಲ್ಲಿ ಹೋಗುತ್ತಿದ್ದೆ, ಆಗ ಕೆಲವರು ಕಾರಿನಲ್ಲಿ ಬಂದರು ಮತ್ತು ಜೈ ಶ್ರೀ ರಾಮ್ ಹೇಳುವಂತೆ ನಮ್ಮನ್ನು ಬೆದರಿಸಿದರು" ಎಂದು ದೂರಿದ್ದಾನೆ.