ಚಿತ್ರದುರ್ಗ:ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ ಯುವತಿಯರಿಬ್ಬರು ಕಾಣೆಯಾಗಿರುವ ಘಟನೆ ನಡೆದಿದೆ.
ಚಿತ್ರದುರ್ಗದ ಗಾರೆಹಟ್ಟಿ ನಿವಾಸಿ ಕೃತಿಕಾ(20),ರೈಲ್ವೇ ಬಡಾವಣೆ ನಿವಾಸಿ ಕೆಎಲ್ ಚೈತ್ರಾ(19) ಮಿಸ್ಸಿಂಗ್ ಆಗಿರೋ ಯುವತಿಯರು ಎಂದು ತಿಳಿದು ಬಂದಿದೆ.

ಒಂದೇ ದಿನದ ಅಂತರದಲ್ಲಿ ಇಬ್ಬರು ಯುವತಿಯರು ನಾಪತ್ತೆಯಾಗಿರುವುದು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಚಿತ್ರದುರ್ಗ ನಗರದಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿನಿ ಕೃತಿಕಾ ಮತ್ತು ಮಹೇಶ್ ಪಿಯು ಕಾಲೇಜು ವಿದ್ಯಾರ್ಥಿನಿ ಕೆ.ಎಲ್ ಚೈತ್ರ ಮಿಸ್ಸಿಂಗ್ ಆಗಿದ್ದು, ಮೇ 5 ಮತ್ತು 6ರಂದು ಮನೆಯಿಂದ ಕಾಲೇಜಿಗೆ ಹೊರಟವರು ನಾಪತ್ತೆಯಾಗಿದ್ದಾರೆ.
ಯುವತಿಯರ ಪತ್ತೆಗೆ ಪೋಷಕರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಚಿತ್ರದುರ್ಗ ನಗರ ಮತ್ತು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.