ಆಲೆಪ್ಪಿ(ಕೇರಳ):ಕೇರಳದ 5 ವಿಧಾನಸಭಾ ಕ್ಷೇತ್ರಗಳಿಗೆ ಸೋಮವಾರ ಉಪಚುನಾವಣೆ ನಡೆದಿದೆ. ಇದೇ ವೇಳೆ ಅಲೆಪ್ಪಿ ಕ್ಷೇತ್ರದಲ್ಲಿ ಕೈ ಬೆರಳಿಗೆ ಶಾಯಿ ಹಾಕಿಸಿಕೊಂಡ ಪುಟ್ಟ ಪೋರಿಯೊಬ್ಬಳು ಮತದಾರರ ಗಮನ ಸಳೆದಳು.
ಅಮ್ಮನ ಜೊತೆ ಮತಗಟ್ಟೆಗೆ ಬಂದು ಕೈ ಬೆರಳಿಗೆ ಶಾಯಿ ಹಾಕಿ ಎಂದಳು ಈ ಪೋರಿ! - ಕೇರಳದಲ್ಲಿ ವಿಧಾನಸಭೆ ಉಪಚುನಾವಣೆ
ಅಲೆಪ್ಪಿಯ ಅರೂರು ಮತಗಟ್ಟೆಯಲ್ಲಿ ಪುಟ್ಟ ಬಾಲಕಿಯೊಬ್ಬಳು ಅಮ್ಮನ ಜೊತೆ ಮತಗಟ್ಟೆಗೆ ಆಗಮಿಸಿ ತನ್ನ ಕೈ ಬೆರಳಿಗೂ ಶಾಯಿ ಹಾಕಿಸಿಕೊಂಡು ಖುಷಿ ಪಟ್ಟಳು.
ಮತದಾನಕ್ಕೆ ಆಗಮಿಸಿ ಕೈಗೆ ಶಾಯಿ ಹಾಕಿಸಿಕೊಂಡ ಬಾಲಕಿ
ತಾಯಿಯ ಜೊತೆಗೆ ಮತಗಟ್ಟೆಗೆ ಆಗಮಿಸಿದ ಕೃಷ್ಣಾ ತನ್ನ ಬೆರಳಿಗೂ ಶಾಯಿ ಹಾಕುವಂತೆ ಅಲ್ಲಿದ್ದ ಚುನಾವಣಾ ಸಿಬ್ಬಂದಿ ಮುಂದೆ ದುಂಬಾಲು ಹಠ ಹಿಡಿದಳಂತೆ. ಆಕೆಯ ಮಾತಿಗೆ ಒಪ್ಪಿದ ಸಿಬ್ಬಂದಿ ಆಕೆಯ ಬೆರಳಿಗೆ ಶಾಯಿ ಹಾಕಿದ್ದಾರೆ. ತಾಯಿ ಮತದಾನ ಮಾಡುವ ವೇಳೆ ಮಗಳು ಸಾಥ್ ಕೊಟ್ಟಿದ್ದು ಕುತೂಹಲ ಕೆರಳಿಸಿತ್ತು.