ಚಿತ್ತೂರು (ಆಂಧ್ರ ಪ್ರದೇಶ): ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿ ನಾಲ್ವರು ನೀರು ಪಾಲಾಗಿರುವ ಹೃದಯ ವಿದ್ರಾವಕ ಘಟನೆ ಆಂಧ್ರದ ಚಿತ್ತೂರಿನ ಕುಪ್ಪಮ್ ಮಂಡಲ್ನಲ್ಲಿ ನಡೆದಿದೆ. ಬಟ್ಟೆ ತೊಳೆಯಲು ತೆರಳಿದ್ದ ಇಬ್ಬರು ಮಹಿಳೆಯರು ಹಾಗೂ ಅವರ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಅಸುನೀಗಿದ್ದಾರೆ.
ಮಕ್ಕಳ ಜೊತೆ ಬಟ್ಟೆ ತೊಳೆಯಲು ಹೋದ ವೇಳೆ, 6 ವರ್ಷದ ಚಿಕ್ಕ ಮಗು ಕೀರ್ತಿ ಆಟವಾಡುತ್ತಾ ಕಾಲು ಜಾರಿ ಕೆರೆಯೊಳಗೆ ಬಿದ್ದಿದೆ. ಇದನ್ನು ಕಂಡ ಅಕ್ಕ 8 ವರ್ಷದ ಆರತಿ ಆಕೆಯನ್ನು ರಕ್ಷಿಸಲು ಕೆರೆಗೆ ಇಳಿದಿದ್ದಾಳೆ. ನೋಡನೋಡುತ್ತಲೇ ಇಬ್ಬರೂ ಮಕ್ಕಳು ನೀರಿನಲ್ಲಿ ಮುಳುಗಿದ್ದಾರೆ.