ಪೇಶಾವರ್:ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ, ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಯುವ್ಯ ಪಾಕಿಸ್ತಾನದಲ್ಲಿ ಇಬ್ಬರು ಭಯೋತ್ಪಾದಕರನ್ನು ಪೊಲೀಸರು ಹೊಡೆದುರುಳಿಸಿದ್ದು, ಇನ್ನೊಂದೆಡೆ ಹಲವು ಉಗ್ರರನ್ನು ಬಂಧಿಸಲಾಗಿದೆ.
ಇಬ್ಬರು ಭಯೋತ್ಪಾದಕರ ಹೆಡೆಮುರಿ ಕಟ್ಟಿದ ಪಾಕ್ ಪೊಲೀಸರು - Pakistan's Khyber Pakhtunkhwa province
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ, ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ, ಟ್ಯಾಂಕ್ ಜಿಲ್ಲೆಯ ಟಟರ್ ರಸ್ತೆಯಲ್ಲಿ ಇಬ್ಬರು ಬೈಕ್ ಸವಾರರನ್ನು ತಡೆಯಲಾಗಿತ್ತು. ಈ ವೇಳೆ, ಅವರು ಭದ್ರತಾ ಸಿಬ್ಬಂದಿಯ ಮೇಲೆ ಗುಂಡು ಹಾರಿಸಲಾರಂಭಿಸಿದ್ದರು. ಆಗ ಕೂಡಲೇ ಅವರ ಮೇಲೆ ಪ್ರತಿದಾಳಿ ನಡೆಸಿ ಹತ್ಯೆಗೈಯಲಾಗಿದೆ. ಇಬ್ಬರು ಭಯೋತ್ಪಾದಕರು ಸಹೋದದರಾಗಿದ್ದು, ಅವಲ್ ಖಾನ್ ಭಿಟ್ಟಾನಿ ಮತ್ತು ಜಹಾಂಜೆಬ್ ಭಿಟ್ಟಾನಿ ಎಂದು ಗುರುತಿಸಲಾಗಿದೆ.
ಹಂಗು ಜಿಲ್ಲೆಯ ಘ್ನಾಯಡಾ ಪ್ರದೇಶದಲ್ಲಿ ಪೊಲೀಸ್ ತಂಡ ಶೋಧ ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಜಲಾವುದ್ದೀನ್ ಮತ್ತು ಶಾಹಿದ್ ಗುಲ್ ಎಂಬ ಇಬ್ಬರು ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಶಾಹಿದ್ ಅಹ್ಮದ್ ತಿಳಿಸಿದ್ದಾರೆ. ಇವರಿಬ್ಬರು ಪೊಲೀಸರ ಕೊಲೆ ಸೇರಿದಂತೆ ಹಲವು ಕೊಲೆ ಪ್ರಕರಣಗಳು ಮತ್ತು ಬಾಂಬ್ ಸ್ಫೋಟಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.