ಶ್ರೀನಗರ (ಜಮ್ಮು ಕಾಶ್ಮೀರ):ಇಬ್ಬರು ಶಂಕಿತ ಉಗ್ರರನ್ನು ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಖಾಜಿಗುಂಡ್ ಎಂಬಲ್ಲಿಯ ಜವಾಹರ್ ಟನಲ್ ಏರಿಯಾದಲ್ಲಿ ಭಾರತೀಯ ಸೇನೆಯ ಯೋಧರು ಬಂಧಿಸಿದ್ದಾರೆ.
ಜಮ್ಮು ಪ್ರದೇಶದಿಂದ ಕಾಶ್ಮೀರಕ್ಕೆ ತೆರಳುತ್ತಿದ್ದ JK22B-1737 ನೋಂದಣಿಯ ಟ್ರಕ್ ಅನ್ನು ತಡೆದು ಅದರಲ್ಲಿದ್ದ ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಇದರ ಜೊತೆಗೆ ಹಲವಾರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.