ಕರ್ನಾಟಕ

karnataka

ETV Bharat / bharat

ಕಾನ್ಪುರ ಎನ್​ಕೌಂಟರ್​​: ಇಬ್ಬರು ಸಬ್​ ಇನ್ಸ್​​ಪೆಕ್ಟರ್ ಸೇರಿ ಮೂವರು ಪೊಲೀಸರು ಅಮಾನತು

ಕಾನ್ಪುರ ಎನ್​ಕೌಂಟರ್​ಗೆ ಸಂಬಂಧಿಸಿದಂತೆ ಇಬ್ಬರು ಸಬ್ ಇನ್ಸ್​ಪೆಕ್ಟರ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

kanpur encounter
ಕಾನ್ಪುರ ಎನ್​ಕೌಂಟರ್​

By

Published : Jul 6, 2020, 12:44 PM IST

ಕಾನ್ಪುರ (ಉತ್ತರ ಪ್ರದೇಶ):ರೌಡಿಗಳು 8 ಪೊಲೀಸರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಬ್​ಇನ್ಸ್​ಪೆಕ್ಟರ್ ಹಾಗೂ ಮೂವರು ಕಾನ್ಸ್​ಟೇಬಲ್​​ಗಳನ್ನ​ ಕರ್ತವ್ಯದಿಂದ ಅಮಾನತುಗೊಂಡಿದ್ದಾರೆ.

ಮೂಲಗಳ ಮಾಹಿತಿಯಂತೆ ಈ ಪೊಲೀಸ್ ಸಿಬ್ಬಂದಿ ಕುಖ್ಯಾತ ರೌಡಿ ಹಾಗೂ ಎನ್​ಕೌಂಟರ್​ಗೆ ಕಾರಣಕರ್ತನಾದ ವಿಕಾಸ್ ದುಬೆಯೊಂದಿಗೆ ಫೋನ್​ ಮೂಲಕ ಸಂಪರ್ಕದಲ್ಲಿದ್ದರೆಂದು ಹೇಳಲಾಗಿದೆ.

ಸಬ್ ಇನ್ಸ್​ಪೆಕ್ಟರ್​ಗಳಾದ ಕುನ್ವಾರ್​ ಪಾಲ್​, ಕೃಷ್ಣಕುಮಾರ್ ಹಾಗೂ ಕಾನ್ಸ್​ಟೇಬಲ್​​​ ರಾಜೀವ್ ಅಮಾನತುಗೊಂಡವರಾಗಿದ್ದಾರೆ.

ಜುಲೈ 2ರ ರಾತ್ರಿ ಚೌಬೇಪುರ ಪೊಲೀಸ್ ಠಾಣಾ ಪ್ರದೇಶದಲ್ಲಿ ಸುಮಾರು 60 ಕ್ರಿಮಿನಲ್​ ಕೇಸ್​​ಗಳನ್ನು ಹೊಂದಿರುವ ವಿಕಾಸ್​ ದುಬೆಯನ್ನು ಬಂಧಿಸಲು ತೆರಳಿದ್ದ ವೇಳೆ ಎನ್​ಕೌಂಟರ್ ನಡೆದಿತ್ತು. ಈ ವೇಳೆ, ಡೆಪ್ಯುಟಿ ಎಸ್​ಪಿ ದೇವೇಂದ್ರ ಮಿಶ್ರಾ, ಮೂವರು ಸಬ್​ ಇನ್ಸ್​ಪೆಕ್ಟರ್​ಗಳು ಹಾಗೂ ನಾಲ್ವರು ಕಾನ್ಸ್​ಟೇಬಲ್​ಗಳು ಸೇರಿ 8 ಮಂದಿ ಪೊಲೀಸರು ಹುತಾತ್ಮರಾಗಿದ್ದರು.

ಇದನ್ನು ಡಿಐಜಿ ಹಂತದಲ್ಲಿ ತನಿಖೆ ನಡೆಸಿ ರೌಡಿ ವಿಕಾಸ್​ ದುಬೆಯನ್ನು ಸೆರೆ ಹಿಡಿಯಲು ಸಾಕಷ್ಟು ಯೋಜನೆಗಳನ್ನು ಪೊಲೀಸರು ರೂಪಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಆತನ ಭಾವಚಿತ್ರವನ್ನು ಅಂಟಿಸಿ ಸಾರ್ವಜನಿಕರ ಸಹಾಯ ಕೋರಲಾಗಿದೆ.

ABOUT THE AUTHOR

...view details