ಹೈದರಾಬಾದ್ :ಪಾನಿಪೂರಿ ಸವಿಯಲು ಹೊರಟ್ಟಿದ್ದ ಇಬ್ಬರು ಯುವಕರು ಪ್ರವಾಹದಲ್ಲಿ ಸಿಲುಕಿ ಸಾವನ್ನಪ್ಪಿದ ಘಟನೆ ಹೈದರಾಬಾದ್ನ ಇಂಜಾಪುರ ಪ್ರದೇಶದಲ್ಲಿ ನಡೆದಿದೆ.
ಪಾನಿಪೂರಿ ಸವಿಯಲು ಹೋದವರು ಪ್ರವಾಹದಲ್ಲಿ ಶವವಾದರು..! - ತೆಲಂಗಾಣದಲ್ಲಿ ಮಳೆ ಅವಾಂತರ
ತೆಲಂಗಾಣದಲ್ಲಿ ಮಳೆ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದ್ದು, ಪಾನಿಪೂರಿ ತಿನ್ನಲು ಹೋದ ಇಬ್ಬರು ಯುವಕರು ಪ್ರವಾಹದಲ್ಲಿ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ.
![ಪಾನಿಪೂರಿ ಸವಿಯಲು ಹೋದವರು ಪ್ರವಾಹದಲ್ಲಿ ಶವವಾದರು..! two death](https://etvbharatimages.akamaized.net/etvbharat/prod-images/768-512-9186461-thumbnail-3x2-raaa.jpg)
ಮಳೆಗೆ ಇಬ್ಬರು ಬಲಿ
ಪ್ರಣಯ್ (16), ಜಯದೀಪ್ (19) ಮೃತಪಟ್ಟ ಯುವಕರಾಗಿದ್ದು, ತೊರೂರ್ ರಾಜೀವ್ ಗೃಹಕಲ್ಪ ಎಂಬಲ್ಲಿ ವಾಸವಿದ್ದರು. ಬುಧವಾರ ಪಾನಿಪೂರಿ ತಿನ್ನಲು ಮನೆಯಿಂದ ತೆರಳಿದ್ದ ಇವರು ಮಳೆಯ ಸಂದರ್ಭದಲ್ಲಿ ತುರ್ಕಯಾಜ್ಮಲ್ ಕೆರೆಗೆ ಆಕಸ್ಮಿಕವಾಗಿ ಬಿದ್ದು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.
ಯುವಕರು ಮನೆಗೆ ಬರದ ಕಾರಣ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸದ್ಯಕ್ಕೆ ಯುವಕರಿಬ್ಬರ ಮೃತದೇಹಗಳು ಇಂಜಾಪುರ ಕೆರೆಯಲ್ಲಿ ಪತ್ತೆಯಾಗಿವೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.