ಚೆನ್ನೈ(ತಮಿಳುನಾಡು): ತಮಿಳುನಾಡಿನಲ್ಲಿ ಕೋವಿಡ್-19ಗೆ ಇಂದು ಇಬ್ಬರು ಬಲಿಯಾಗಿದ್ದಾರೆ. ಇದರಿಂದ ಸೋಂಕಿಗೆ ಬಲಿಯಾದವರ ಸಂಖ್ಯೆ ರಾಜ್ಯದಲ್ಲಿ 5ಕ್ಕೆ ಏರಿಕೆಯಾಗಿದೆ.
ತಮಿಳುನಾಡಿನಲ್ಲಿ ಸೋಂಕಿಗೆ ಇಂದು ಇಬ್ಬರ ಬಲಿ: ಐದಕ್ಕೇರಿದ ಸಾವಿನ ಸಂಖ್ಯೆ - ಕೊರೊನಾ ಸಾವು
ತಮಿಳುನಾಡಿನಲ್ಲಿ ಇಂದು ಕೊರೊನಾ ಸೋಂಕಿಗೆ ಇಬ್ಬರ ಬಲಿಯಾಗಿದೆ. ಇದರಿಂದ ರಾಜ್ಯದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಈಗ ರಾಜ್ಯದಲ್ಲಿ 485 ಮಂದಿ ಸೋಂಕಿತರಿದ್ದು, ಕೇವಲ ಏಳು ಮಂದಿ ಗುಣಮುಖರಾಗಿದ್ದಾರೆ.
ಇಂದು ಬೆಳಗ್ಗೆ ಸ್ಟ್ಯಾನ್ಲಿ ಆಸ್ಪತ್ರೆಯಲ್ಲಿ 60 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದನು. ಈತ ಏಪ್ರಿಲ್ 1ರಂದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ. ಇದರ ಜೊತೆಗೆ ರಾಮನಾಥಪುರದಲ್ಲಿ 71 ವರ್ಷದ ವೃದ್ಧ ಏಪ್ರಿಲ್ 2ರಂದು ಸಾವನ್ನಪ್ಪಿದ್ದು, ಇಂದು ಬೆಳಗ್ಗೆ ಆತನಲ್ಲಿ ಕೊರೊನಾ ಸೋಂಕಿರುವುದಾಗಿ ದೃಢಪಟ್ಟಿದೆ.
ಶನಿವಾರ ಇಬ್ಬರು ಕೊರೊನಾ ಸೋಂಕಿತರು ತಮಿಳುನಾಡಿನಲ್ಲಿ ಮೃತಪಟ್ಟಿದ್ದರು. ಇದಕ್ಕೂ ಮೊದಲು ಓರ್ವ ವ್ಯಕ್ತಿ ಸೋಂಕಿಗೆ ಸಾವನ್ನಪ್ಪಿದ್ದ. ಇದರಿಂದಾಗಿ ಈವರೆಗೂ ತಮಿಳುನಾಡಲ್ಲಿ ಸೋಂಕಿಗೆ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 485 ಕೊರೊನಾ ಸೋಂಕಿತರಿದ್ದು, ಕೇವಲ ಏಳು ಮಂದಿ ಸೋಂಕಿನಂದ ಗುಣಮುಖರಾಗಿದ್ದಾರೆ.