ಕರ್ನಾಟಕ

karnataka

ETV Bharat / bharat

ಗುಂಡಿನ ಚಕಮಕಿ: ಇಬ್ಬರು ದುಷ್ಕರ್ಮಿಗಳ ಬಂಧನ - two miscreants who fired on the constable were arrested

ಗುಜರಾತ್​ನ ದ್ವಾರಕಾ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ದಳ, ಎಟಿಎಸ್​ ಹಾಗೂ ಸೆಕ್ಟರ್ 23 ರ ಜಂಟಿ ತಂಡದ ಕಾರ್ಯಾಚರಣೆಯಲ್ಲಿ ಇಬ್ಬರು ಕುಖ್ಯಾತ ದುಷ್ಕರ್ಮಿಗಳನ್ನು ಬಂಧಿಸಲಾಗಿದೆ.

two miscreants who fired on the constable were arrested
ಇಬ್ಬರು ದುಷ್ಕರ್ಮಿಗಳ ಬಂಧನ

By

Published : Mar 16, 2020, 5:20 PM IST

ಗುಜರಾತ್: ದ್ವಾರಕಾ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ದಳ, ಎಟಿಎಸ್​ ಹಾಗೂ ಸೆಕ್ಟರ್ 23 ರ ಜಂಟಿ ತಂಡದ ಕಾರ್ಯಾಚರಣೆಯಲ್ಲಿ ಇಬ್ಬರು ಕುಖ್ಯಾತ ದುಷ್ಕರ್ಮಿಗಳನ್ನು ಬಂಧಿಸಲಾಗಿದೆ.

ಪೊಲೀಸ್ ತಂಡ ಹಾಗೂ ದುಷ್ಕರ್ಮಿಗಳ ಮಧ್ಯೆ ಗುಂಡಿನ ಚಕಮಕಿ

ಪೊಲೀಸ್ ತಂಡ ಹಾಗೂ ದುಷ್ಕರ್ಮಿಗಳ ಮಧ್ಯೆ ಕೆಲ ಹೊತ್ತು ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರೂ ದುಷ್ಕಮಿರ್ಗಳ ಕಾಲಿಗೆ ಪೊಲೀಸರು ಹಾರಿಸಿದ ಗುಂಡು ತಗುಲಿವೆ. ಗಾಯಗೊಂಡ ಇಬ್ಬರನ್ನು ಜಾಫರಪುರ ಕಲಾಂನ ರಾವುತೌಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರ ಮೇಲೆ ಫೈರಿಂಗ್ ಮಾಡಿದ ದುಷ್ಕರ್ಮಿಗಳು:ಮೊಹಮ್ಮದ್​ ಅಲಿ ಹಾಗೂ ಸುಲ್ತಾನ್​ ಅಲಿ ಎಂಬ ಹೆಸರಿನ ದುಷ್ಕರ್ಮಿಗಳು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಕಾನ್​​ಸ್ಟೇಬಲ್ ರಾಜೀವ್​ ಕುಮಾರ್​ ಅವರ ಮೇಲೆ ಫೈರಿಂಗ್ ಮಾಡಿದ್ದರು ಎಂದು ಸ್ಥಳೀಯ ಡಿಸಿಪಿ ತಿಳಿಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಎರಡೂ ಕಡೆಗಳಿಂದ 6 ರೌಂಡ್ ಗುಂಡು ಹಾರಿಸಲಾಗಿದೆ. ದುಷ್ಕರ್ಮಿಗಳು ಪೊಲೀಸರ ಮೇಲೆ 2 ರೌಂಡ್ ಹಾಗೂ ಪ್ರತಿಯಾಗಿ ಪೊಲೀಸರು ಅವರ ಮೇಲೆ 4 ರೌಂಡ್ ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ದುಷ್ಕರ್ಮಿಗಳ ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊಹಮ್ಮದ್​ ಅಲಿ ಹಾಗೂ ಸುಲ್ತಾನ್​ ಅಲಿ ಅವರೊಂದಿಗೆ ಸೇರಿಕೊಂಡು ಕಾನ್​ಸ್ಟೇಬಲ್ ಮೇಲೆ ಗುಂಡು ಹಾರಿಸಿದ ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಬೇಟೆ ಆರಂಭಿಸಿದ್ದಾರೆ.

ABOUT THE AUTHOR

...view details