ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ರಾತ್ರಿಯಿಡೀ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ.
ಚೆವಾ ಉಲಾರ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಗುರುವಾರ ಶೋಧ ಕಾರ್ಯಾಚರಣೆ ನಡೆಸಿದ್ದರು. ಉಗ್ರರು ಗುಂಡು ಹಾರಿಸಲು ಪ್ರಾರಂಭಿಸಿದ ಬಳಿಕ ಶೋಧ ಕಾರ್ಯ ಎನ್ಕೌಂಟರ್ಗೆ ತಿರುಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ನಿನ್ನೆ ಬೆಳಗ್ಗೆ ಕೂಡ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರ ಹೆಡೆ ಮುರಿ ಕಟ್ಟಲಾಗಿತ್ತು. ಇನ್ನು ಜೂನ್ 23 ರಂದು ಪುಲ್ವಾಮಾದಲ್ಲಿ ಇಬ್ಬರು ಉಗ್ರರನ್ನು ಹಾಗೂ ಜೂನ್ 20 ಕುಲ್ಗಾಂ ಜಿಲ್ಲೆಯಲ್ಲಿ ಓರ್ವ ಉಗ್ರನನ್ನು ಭಾರತೀಯ ಭದ್ರತಾ ಪಡೆ ಹತ್ಯೆ ಮಾಡಿದೆ.
ಕಳೆದ ಕೆಲ ತಿಂಗಳಿಂದ ಭಾರತೀಯ ಸೇನೆ ಮತ್ತು ಗಡಿ ಭದ್ರತಾ ಪಡೆ ಸಿಬ್ಬಂದಿ ಉಗ್ರರ ವಿರುದ್ಧ ನಿರಂತರ ಕಾರ್ಯಾಚರಣೆ ಕೈಗೊಂಡಿದೆ. ಇದುವರೆಗೂ ಸುಮಾರು 100ಕ್ಕೂ ಹೆಚ್ಚು ಭಯೋತ್ಪಾದಕರನ್ನ ಹೊಡೆದುರುಳಿಸಿದ್ದು, ನಿತ್ಯವೂ ಬೇಟೆಯಾಡಲಾಗುತ್ತಿದೆ. ಚೀನಾ - ನೇಪಾಳ ಮತ್ತೊಂದು ಬದಿ ಭಾರತಕ್ಕೆ ಕಿರುಕುಳ ನೀಡುತ್ತಿದ್ದರೂ ಕಾಶ್ಮೀರದಲ್ಲಿ ಉಗ್ರರ ದಮನ ಮುಂದುವರೆದಿದೆ.