ಕಾನ್ಪುರ್ (ಉತ್ತರ ಪ್ರದೇಶ):ಕಾರು ಸಮೇತ ಇಬ್ಬರು ಯುವಕರನ್ನು ಅಪಹರಿಸಿದ ದುಷ್ಕರ್ಮಿಗಳು, ಕಾರು ಮತ್ತು ಓರ್ವ ಯುವಕನನ್ನು ಕಾನ್ಪುರದಲ್ಲಿ ಬಿಟ್ಟು ಮತ್ತೋರ್ವನನ್ನು ಕರೆದೊಯ್ದಿದ್ದಾರೆ.
ಶಿವಂ ಮತ್ತು ರವೀಂದ್ರ ಎಂಬ ಇಬ್ಬರು ಯುವಕರು ಅಕ್ಬರ್ಪುರ ಬಳಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಮೂವರು ದುಷ್ಕರ್ಮಿಗಳು ಬೈಕ್ನಲ್ಲಿ ಬಂದು ಕಾರನ್ನು ಹಿಂದಿಕ್ಕಿದ್ದಾರೆ. ಬೈಕ್ನಿಂದ ಇಳಿದು ಬಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಕಾರಿನಲ್ಲಿ ಕುಳಿತು, ಕಾರು ಚಾಲನೆ ಮಾಡುತ್ತಿದ್ದ ಶಿವಂನನ್ನು ಹಿಂದಿನ ಸೀಟ್ಗೆ ತಳ್ಳಿ ಕಾನ್ಪುರದತ್ತ ಕಾರು ಚಲಾಯಿಸಿದ್ದಾರೆ.