ಹೈದರಾಬಾದ್: ಕರ್ತವ್ಯ ನಿರತ ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಲಾಗಿದೆ.
ಅಂತರ ಕಾಯ್ದುಕೊಳ್ಳಿ ಎಂದಿದ್ದೇ ತಪ್ಪಾ?... ಪೊಲೀಸ್ ಪೇದೆಗೆ ಹಿಗ್ಗಾ ಮುಗ್ಗ ಥಳಿಸಿದ ಯುವಕರು - ಪೊಲೀಸ್ ಪೇದೆ ಮೇಲೆ ಹಲ್ಲೆ ಆರೋಪಿಗಳು ಅಂದರ್
ಹೈದರಾಬಾದ್ನಲ್ಲಿ ಕಾರ್ಯನಿರತ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ ಪ್ರಕಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ.
![ಅಂತರ ಕಾಯ್ದುಕೊಳ್ಳಿ ಎಂದಿದ್ದೇ ತಪ್ಪಾ?... ಪೊಲೀಸ್ ಪೇದೆಗೆ ಹಿಗ್ಗಾ ಮುಗ್ಗ ಥಳಿಸಿದ ಯುವಕರು Police constable in Hyderabad](https://etvbharatimages.akamaized.net/etvbharat/prod-images/768-512-6717249-282-6717249-1586369925569.jpg)
ನಗರದ ಬ್ಯಾಂಕ್ ಒಂದರ ಬಳಿ ಪೊಲೀಸ್ ಪೇದೆ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಬ್ಯಾಂಕ್ಗೆ ಹಣ ಪಡೆಯಲು ಬಂದ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪಾಗಿ ಸೇರಿದ್ದರು. ಇದನ್ನು ಕಂಡು ಪೇದೆ ಅಂತರ ಕಾಯ್ದಕೊಳ್ಳುವಂತೆ ಸೂಚಿಸಿದ್ದಾರೆ. ಇದರಿಂದ ವ್ಯಕ್ತಿಯೊಬ್ಬ ಪೇದೆ ಜೊತೆ ವಾಗ್ವಾದ ನಡೆಸಿದ್ದ ಅಲ್ಲದೆ, ತನ್ನ ಸ್ನೇಹಿತನನ್ನು ಕರೆಸಿ, ಇಬ್ಬರು ಜೊತೆಗೂಡಿ ಕರ್ತವ್ಯ ನಿರತ ಪೇದೆ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಪೇದೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ 20 ವರ್ಷ ಪ್ರಾಯದ ಮೆಕ್ಯಾನಿಕ್ ಹಾಗೂ ಆತನ ಸ್ನೇಹಿತನನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ.