ಕರ್ನಾಟಕ

karnataka

ETV Bharat / bharat

ಮನೆ ಮಾಲೀಕನೊಂದಿಗೆ ಜಗಳ... ಬೆದರಿಸಲು 16 ಕಚ್ಚಾ ಬಾಂಬ್​ ತಂದ ಯುವಕರು! - ಬರೇಲಿ ಸುದ್ದಿ,

ಕೆಲ ಯುವಕರು ಕ್ಷುಲ್ಲಕ ಕಾರಣಕ್ಕೆ ಮನೆ ಮಾಲೀಕನೊಂದಿಗೆ ಜಗಳವಾಡಿದ್ದು, ಕಚ್ಚಾ ಬಾಂಬ್​ನಿಂದ ಮಾಲೀಕನನ್ನು ಬೆದರಿಸಲು ಮತ್ತು ಆಸ್ತಿ-ಪಾಸ್ತಿ ಹಾನಿಗೊಳಿಸಲು ಸ್ಕೆಚ್​ ಹಾಕಿರುವ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.

16 country made bombs seized, 16 country made bombs seized in Bareilly, 16 country made bombs seized news, Bareilly news, Bareilly crime news, 16 ಕಚ್ಚಾ ಬಾಂಬ್​ ವಶ, ಬರೇಲಿಯಲ್ಲಿ 16 ಕಚ್ಚಾ ಬಾಂಬ್​ ವಶ, ಬರೇಲಿ ಸುದ್ದಿ, ಬರೇಲಿ ಅಪರಾಧ ಸುದ್ದಿ,
ಮನೆ ಮಾಲೀಕನ ಬೆದರಿಸಲು 16 ಕಚ್ಚಾ ಬಾಂಬ್​ ತಂದ ಯುವಕರು

By

Published : Aug 25, 2020, 1:14 PM IST

ಬರೇಲಿ (ಉತ್ತರಪ್ರದೇಶ):ಮನೆ ಮಾಲೀಕನೊಂದಿಗೆ ಜಗಳವಾಡಿದ ಯುವಕರು ಕಚ್ಚಾ ಬಾಂಬ್​ನಿಂದ ಆತನನ್ನು ಬೆದರಿಸಿ ಆಸ್ತಿ-ಪಾಸ್ತಿ ಹಾನಿಗೊಳಿಸಲು ಸ್ಕೆಚ್​ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಮನೆ ಮಾಲೀಕನ ಬೆದರಿಸಲು 16 ಕಚ್ಚಾ ಬಾಂಬ್​ ತಂದ ಯುವಕರು

ಇಲ್ಲಿನ ಖೇಲಂ ಗ್ರಾಮದ ಬಬ್ಲು, ಜೈವೀರ್​ ಮತ್ತು ಹಲೀನ್​ ಎಂಬುವರು ಮನೆ ಮಾಲೀಕ ಖಾನ್​ ಸಿಂಗ್​ನೊಂದಿಗೆ ಜಗಳವಾಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದ್ದು, ಆತನ ಆಸ್ತಿಯನ್ನು ಹಾನಿಗೊಳಿಸಲು ಮತ್ತು ಬೆದರಿಕೆ ಹಾಕಲು ಮೂವರು ಸ್ಕೆಚ್​ ಹಾಕಿದ್ದಾರೆ. ಹೀಗಾಗಿ ಯುವಕರು ಕಚ್ಚಾ ಬಾಂಬ್​ಗಳನ್ನು ತಂದು ಸಿಂಗ್​ರ ಮನೆಯಲ್ಲಿಟ್ಟಿದ್ದರು.

ಇದರ ಬಗ್ಗೆ ಮಾಲೀಕ ಸಿಂಗ್​ಗೆ ತಿಳಿದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸುದ್ದಿ ತಿಳಿದ ಪೊಲೀಸರು ಮನೆ ಪರಿಶೀಲಿಸಿದಾಗ 16 ಕಚ್ಚಾ ಬಾಂಬ್​ಗಳು ದೊರೆತಿದ್ದು, ಕೂಡಲೇ ಬಬ್ಲು ಮತ್ತು ಜೈವೀರ್​ನನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಹಲೀನ್​ ಪರಾರಿಯಾಗಿದ್ದಾನೆ.

ಆರೋಪಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಮಾಲೀಕ ಸಿಂಗ್​ರ ಆಸ್ತಿ-ಪಾಸ್ತಿಗೆ ಹಾನಿ ಮಾಡಲು ಕಚ್ಚಾ ಬಾಂಬ್​ಗಳನ್ನು ತಂದಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ABOUT THE AUTHOR

...view details