ನವದೆಹಲಿ :ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರು ಜಾಂಬಿಯಾನ್ ಪ್ರಜೆಗಳನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಂಧಿಸಿದದ್ದು, ಅವರಿಂದ 5.350 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದೆ.
22 ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ ಅವರಲ್ಲಿ ಒಬ್ಬನನ್ನು ಡಿಸೆಂಬರ್ 25ರಂದು ಬಂಧಿಸಲಾಗಿದ್ದರೆ, ಮತ್ತೊಬ್ಬನನ್ನು ಡಿಸೆಂಬರ್ 31ರಂದು ಬಂಧಿಸಲಾಗಿದೆ. ಇವರಿಂದ 22 ಕೋಟಿ ಮೌಲ್ಯದ ಹೆರಾಯಿನ್ ಅನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎನ್‌ಸಿಬಿ ಹೇಳಿದೆ.
ಇದನ್ನೂ ಓದಿ:26/11 ಮುಂಬೈ ದಾಳಿಯ ಪಾತಕಿ ಲಖ್ವಿ ಪಾಕಿಸ್ತಾನದಲ್ಲಿ ಅರೆಸ್ಟ್
ಡಿಸೆಂಬರ್ 25ರಂದು ನಿಖರ ಮಾಹಿತಿಯ ಮೇರೆಗೆ ವಿಮಾನ ನಿಲ್ದಾಣದ ಟಿ-3ರ ಬಳಿಯಿದ್ದ ಜಾಂಬಿಯಾದ ಪ್ರಜೆಯಾದ ಮುಲಾಪಿ ಜೋಶುವಾ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಈ ವೇಳೆ ತಪಾಸಣೆ ನಡೆಸಿದಾಗ 4.650 ಕೆಜಿ ಹೆರಾಯಿನ್ ಪತ್ತೆಯಾಗಿತ್ತು. ಆರೋಪಿಯನ್ನು ತಕ್ಷಣ ಬಂಧಿಸಿ, ತನಿಖೆ ಮುಂದುವರೆಸಲಾಯಿತು.
ಇದಾದ ನಂತರ ಡಿಸೆಂಬರ್ 31ರಂದು ಮಾಂಬ್ವೆ ವಿಲಿಯಂ ಎಂಬಾತನನ್ನು ವಶಕ್ಕೆ ಪಡೆದು, ಆತನಿಂದ 700 ಗ್ರಾಂ ಹೆರಾಯಿನ್ ಜಪ್ತಿ ಮಾಡಲಾಗಿದೆ ಎಂದು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ದಳ ಹೇಳಿದೆ.