ಹೈದರಾಬಾದ್ (ತೆಲಂಗಾಣ):ಯಾವುದೇ ಅರ್ಹತೆ ಹಾಗೂ ಪರವಾನಗಿ ಇಲ್ಲದೇ ರಾಜಧಾನಿಯಲ್ಲಿ ಆಸ್ಪತ್ರೆ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ತಾವು ವೈದ್ಯರೆಂದು ಬಿಂಬಿಸಿಕೊಂಡು ಜನರನ್ನ ವಂಚನೆ ಮಾಡುತ್ತಿದ್ದರು ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ.
ಮೊಹಮ್ಮದ್ ಶೋಯೆಬ್ ಸುಭಾನಿ ಮತ್ತು ಮೊಹಮ್ಮದ್ ಅಬ್ದುಲ್ ಮುಜೀಬ್ ಬಂಧಿತ ಆರೋಪಿಗಳಾಗಿದ್ದಾರೆ. ಈ ಇಬ್ಬರು 'ಸಮೀರ್ ಆಸ್ಪತ್ರೆ' ಎಂಬ ಹಾಸ್ಪಿಟಲ್ ನಡೆಸುತ್ತಿದ್ದರು. ಡಾ. ಮೊಹಮ್ಮದ್ ಅಬ್ದುಲ್ ಮುಜೀಬ್ ಎಂಬುವವರ ಹೆಸರಲ್ಲಿ ಈ ಆಸ್ಪತ್ರೆಯನ್ನ ನೋಂದಣಿ ಮಾಡಿಸಲಾಗಿತ್ತು. ಪೊಲೀಸರು ಬಂಧಿತರಿಂದ ಆಸ್ಪತ್ರೆ ನೋಂದಣಿ ಪತ್ರ ಮತ್ತು ಆಧಾರ್ ಕಾರ್ಡ್ ವಶಕ್ಕೆ ಪಡೆದಿದ್ದಾರೆ.