ಗಾಜಿಯಾಬಾದ್: ಮದ್ಯಪಾನ ಸಿಗದ ಕಾರಣ ಇಬ್ಬರು ಕುಡುಕರು ಆಲ್ಕೋಹಾಲ್ ಕಂಟೆಂಟ್ ಒಳಗೊಂಡ ಉಗುರು ಬಣ್ಣ ರಿಮೂವರ್, ಶೇವಿಂಗ್ ನಂತರ ಬಳಸುವ ಲೋಶನ್ ಹಾಗೂ ಸ್ಯಾನಿಟೈಜರ್ ಕುಡಿದು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ. ಮತ್ತೊಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಣ್ಣೆ ಸಿಗದೇ ಆಲ್ಕೋಹಾಲ್ ಮಿಶ್ರಿತ ರಾಸಾಯನಿಕ ಕುಡಿದು ಇಬ್ಬರ ಸಾವು.. - ಆಲ್ಕೋಹಾಲ್ ಮಿಶ್ರಿತ ರಾಸಾಯನಿಕ ಸೇವಿಸಿ ಸಾವು
ಕುಡಿಯಲು ಎಣ್ಣೆ ಸಿಗದ ಕಾರಣ ಆಲ್ಕೋಹಾಲ್ ಮಿಶ್ರಿತ ರಾಸಾಯನಿಕಗಳನ್ನು ಕುಡಿದು ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನೊಬ್ಬನ ಸ್ಥಿತಿ ಚಿಂತಾಜನಕವಾಗಿದೆ.

ಮಂಗತ್ ರಾಮ್ ಶರ್ಮಾ (60) ಮತ್ತು ಕೃಷ್ಣ ಪಾಲ್ ಅಲಿಯಾಸ್ ಪಾಲಿ (40) ಎಂಬಿಬ್ಬರು ಮೃತರೆಂದು ಗುರುತಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮೃತ ಮಂಗತ್ ರಾಯ್ ಮಗ, ತಮ್ಮ ತಂದೆ ಕುಡಿಯಲು ಇರದೇ ಆಗುತ್ತಿರಲಿಲ್ಲ. ಆದರೆ, ಲಾಕ್ಡೌನ್ ಹಿನ್ನೆಲೆ ಮದ್ಯ ಸಿಗದ ಕಾರಣ ಆಲ್ಕೋಹಾಲ್ ಅಂಶ ಒಳಗೊಂಡಿರುವ ಆಫ್ಟರ್ ಶೇವ್ ಲೋಶನ್,ನೈಲ್ ಪಾಲೀಶ್ ರಿಮೂವರ್ ತಂದು ಕುಡಿದಿದ್ದಾರೆ ಎಂದು ತಿಳಿಸಿದ್ದಾರೆ. ತಕ್ಷಣ ಮೂವರನ್ನು ಆಸ್ಪತ್ರೆಗ ಸೇರಿಸಲಾಯಿತಾದರೂ ಇಬ್ಬರು ಮೃತಪಟ್ಟಿದ್ದಾರೆ. ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.
ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.