ನಾಗೌರ್(ರಾಜಸ್ಥಾನ): ಜಿಲ್ಲೆಯ ಸಮೀಪ ಯುವಕರ ಮೇಲೆ ಸ್ನೇಹಿತರ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
ಎಣ್ಣೆ ಅಮಲಲ್ಲಿ ಯುವಕರ ಮೇಲೆ ಸ್ನೇಹಿತರಿಂದ ಹಲ್ಲೆ - ದಲಿತ ಯುವಕರ ಮೇಲೆ ಹಲ್ಲೆ
ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ಸ್ನೇಹಿತರ ನಡುವೆ ಮದ್ಯ ಸೇವಿಸುವ ವೇಳೆ ಜಗಳ ನಡೆದಿದ್ದು, ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಸಾಂದರ್ಭಿಕ ಚಿತ್ರ
ವರದಿಗಳ ಪ್ರಕಾರ, ಸ್ನೇಹಿತರ ಗುಂಪೊಂದು ಎಣ್ಣೆ ಪಾರ್ಟಿ ಮಾಡುತ್ತಿದ್ದ ವೇಳೆ ಸಲ್ಲದ ವಿಷಯದ ಬಗ್ಗೆ ಚರ್ಚೆ ನಡೆಸಲಾಗಿದೆ. ಇದರ ಪರಿಣಾಮ ಗುಂಪಿನಲ್ಲಿ ಸಂಘರ್ಷ ಏರ್ಪಟ್ಟಿದ್ದು, ಕುಡಿದ ಮತ್ತಿನಲ್ಲಿ ದಲಿತ ಯುವಕರ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಮಾಹಿತಿ ಇದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿತೇಶ್ ಗುಪ್ತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
Last Updated : Jun 5, 2020, 3:16 PM IST