ಕರ್ನಾಟಕ

karnataka

ETV Bharat / bharat

ಉಗ್ರರ ಗುಂಡಿನ ದಾಳಿ: ಇಬ್ಬರು ಸಿಆರ್​ಪಿಎಫ್​ ಯೋಧರು, ಓರ್ವ ಪೊಲೀಸ್​ ಹುತಾತ್ಮ - ಸಿಆರ್​ಪಿಎಫ್​ ಯೋಧರು, ಓರ್ವ ಪೊಲೀಸ್​ ಹುತಾತ್ಮ

ಉಗ್ರರ ಗುಂಡಿನ ದಾಳಿಯಲ್ಲಿ ಇಬ್ಬರು ಸಿಆರ್​ಪಿಎಫ್​ ಯೋಧರು ಹಾಗೂ ವಿಶೇಷ ಪೊಲೀಸ್ ಅಧಿಕಾರಿಯೊಬ್ಬರು ​ಹುತಾತ್ಮರಾಗಿದ್ದಾರೆ ಎಂದು ಜಮ್ಮು- ಕಾಶ್ಮೀರದ ಇನ್​ಸ್ಪೆಕ್ಟರ್​ ಜನರಲ್​ ವಿಜಯ್​ ಕುಮಾರ್​ ತಿಳಿಸಿದ್ದಾರೆ.

CRPF personal and one SPO killed in militant attack
ಉಗ್ರರ ಗುಂಡಿನ ದಾಳಿ

By

Published : Aug 17, 2020, 10:57 AM IST

Updated : Aug 17, 2020, 11:24 AM IST

ಬಾರಾಮುಲ್ಲಾ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಗೆ ಇಬ್ಬರು ಸಿಆರ್​ಪಿಎಫ್​ ಯೋಧರು ಹಾಗೂ ವಿಶೇಷ ಪೊಲೀಸ್ ಅಧಿಕಾರಿಯೊಬ್ಬರು ​ಹುತಾತ್ಮರಾಗಿದ್ದಾರೆ.

ಉಗ್ರರ ಗುಂಡಿನ ದಾಳಿಗೆ ಇಬ್ಬರು ಸಿಆರ್​ಪಿಎಫ್​ ಯೋಧರು, ಓರ್ವ ಪೊಲೀಸ್​ ಹುತಾತ್ಮ

ಇಂದು ಬೆಳಗ್ಗೆ ಬಾರಾಮುಲ್ಲಾ ಜಿಲ್ಲೆಯ ಕ್ರೀರಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಕೇಂದ್ರ ಮೀಸಲು ಪೊಲೀಸ್​ ಪಡೆ (ಸಿಆರ್​ಪಿಎಫ್) ಸಿಬ್ಬಂದಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದ ಇಬ್ಬರು ​ಯೋಧರು ಮತ್ತು ವಿಶೇಷ ಪೊಲೀಸ್ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದಾರೆ ಎಂದು ಜಮ್ಮು-ಕಾಶ್ಮೀರದ ಇನ್​ಸ್ಪೆಕ್ಟರ್​ ಜನರಲ್​ ವಿಜಯ್​ ಕುಮಾರ್​ ತಿಳಿಸಿದ್ದಾರೆ.

ಕ್ರೀರಿ ಪ್ರದೇಶದಲ್ಲಿ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ವಿಜಯ್​ ಕುಮಾರ್ ಹೇಳಿದ್ದಾರೆ.

Last Updated : Aug 17, 2020, 11:24 AM IST

For All Latest Updates

ABOUT THE AUTHOR

...view details