ಕರ್ನಾಟಕ

karnataka

ETV Bharat / bharat

ಶ್ರೀನಗರ.. ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಸಿಆರ್‌ಪಿಎಫ್ ಯೋಧರ ಆತ್ಮಹತ್ಯೆ.. - ಶ್ರೀನಗರ

ಇನ್ನೊಂದು ಪ್ರಕರಣದಲ್ಲಿ ಸೋಮವಾರ ಸಂಜೆ ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಮಟ್ಟನ್ ಪ್ರದೇಶದಲ್ಲಿ 96ನೇ ಬೆಟಾಲಿಯನ್‌ನ ಸಬ್ ಇನ್ಸ್‌ಪೆಕ್ಟರ್ ಫತೇಹ್ ಸಿಂಗ್ ಸ್ವತಃ ಗುಂಡು ಹಾರಿಸಿಕೊಂಡಿದ್ದಾರೆ. ಸಿಂಗ್ ರಾಜಸ್ಥಾನದ ಜೈಸಲ್ಮೇರ್ ಮೂಲದವರು ಎಂದು ಮಾಹಿತಿ ನೀಡಿದ್ದಾರೆ.

two-crpf-officers-commit-suicide-in-kashmir
ಶ್ರೀನಗರ: ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಸಿಆರ್ ಪಿಎಫ್ ಯೋಧರ ಆತ್ಮಹತ್ಯೆ...!

By

Published : May 12, 2020, 4:10 PM IST

ಶ್ರೀನಗರ :ಕಣಿವೆಯಲ್ಲಿ ನಿಯೋಜಿಸಲಾಗಿರುವ ಅರೆಸೈನಿಕ ಪಡೆಗಳಲ್ಲಿ ಇಬ್ಬರು ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಕಳೆದೆರಡು ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಶ್ರೀನಗರದ ಸಿಆರ್‌ಪಿಎಫ್ ವಕ್ತಾರ ಪಂಕಜ್ ಸಿಂಗ್ ಅವರು ಈಟಿವಿ ಭಾರತ್‌ಗೆ ಮಾಹಿತಿ ತಿಳಿಸಿದ್ದು, 49ನೇ ಬೆಟಾಲಿಯನ್‌ನ ಸಹಾಯಕ ಸಬ್ ಇನ್ಸ್‌ಪೆಕ್ಟರ್, ಬಂಗಾಳಿ ಬಾಬು ಅವರು ಶ್ರೀನಗರದ ಕರಣ್‌ನಗರ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ತಮ್ಮ ಸೇವಾ ರೈಫಲ್‌ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಬಾಬು ಮಧ್ಯಪ್ರದೇಶದ ಗ್ವಾಲಿಯರ್ ನಗರದ ನಿವಾಸಿ.

ಇನ್ನೊಂದು ಪ್ರಕರಣದಲ್ಲಿ ಸೋಮವಾರ ಸಂಜೆ ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಮಟ್ಟನ್ ಪ್ರದೇಶದಲ್ಲಿ 96ನೇ ಬೆಟಾಲಿಯನ್‌ನ ಸಬ್ ಇನ್ಸ್‌ಪೆಕ್ಟರ್ ಫತೇಹ್ ಸಿಂಗ್ ಸ್ವತಃ ಗುಂಡು ಹಾರಿಸಿಕೊಂಡಿದ್ದಾರೆ. ಸಿಂಗ್ ರಾಜಸ್ಥಾನದ ಜೈಸಲ್ಮೇರ್ ಮೂಲದವರು ಎಂದು ಮಾಹಿತಿ ನೀಡಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು, ಸಿಂಗ್ ಕೋವಿಡ್-19 ಸೋಂಕಿಗೆ ಒಳಗಾಗಬಹುದೆಂಬ ಭಯ ಹೊಂದಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಎರಡೂ ಘಟನೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಶವಪರೀಕ್ಷೆಯ ವರದಿಗಾಗಿ ಕಾಯಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ABOUT THE AUTHOR

...view details