ಲಿಂಗಾರೆಡ್ಡಿಗುಡಾ(ತೆಲಂಗಾಣ): ಹಿರಿಯರು ತಮ್ಮ ಮದುವೆಗೆ ವಿರೋಧ ವ್ಯಕ್ತಪಡಿಸುತ್ತಾರೆ ಎಂಬ ಭಯದಿಂದ ಪ್ರೇಮಿಗಳಿಬ್ಬರು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಾಕಿಂಗ್... ಆತ್ಮಹತ್ಯೆಗೆ ಶರಣಾದ ನಾಲ್ವರು ಪ್ರೇಮಿಗಳು! - ಯುವ ಜೋಡಿ ಆತ್ಮಹತ್ಯೆ
ತಮ್ಮ ಪ್ರೀತಿಗೆ ಮನೆಯವರು ವಿರೋಧ ವ್ಯಕ್ತಪಡಿಸುತ್ತಾರೆ ಎಂಬ ಭಯದಿಂದ ಪ್ರೇಮಿಗಳಿಬ್ಬರು ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ಗ್ರಾಮದ ಹೊರವಲಯದಲ್ಲಿ ಮರದ ಕೊಂಬೆಗೆ ನೇಣು ಬಿಗಿದುಕೊಂಡು ಯುವ ಜೋಡಿ ಆತ್ಮಹತ್ಯೆ ಮಾಡಿಕೊಂಡಿದ್ದು, ತೆಲಂಗಾಣದ ಶಾಬಾದ್ ಮಂಡಲದ ಲಿಂಗಾರೆಡ್ಡಿಗುಡಾದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಪಲ್ಲವಿ(19 ವರ್ಷ) ಹಾಗೂ ಅಶಮಲ್ಲ ಮಹೇಂದರ್(21 ವರ್ಷ) ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವೇಳೆ ತಮ್ಮ ಪ್ರೇಮದ ಬಗ್ಗೆ ಪೋಷಕರ ಮುಂದೆ ಹೇಳಿಕೊಂಡರೆ ವಿರೋಧ ವ್ಯಕ್ತಪಡಿಸುತ್ತಾರೆ ಎಂಬ ಭಯದಿಂದ ಒಂದೇ ಮರದ ಕೊಂಬೆಗೆ ನೇಣು ಹಾಕಿಕೊಂಡಿದ್ದಾರೆ. ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.
ಇನ್ನು ಕೇಶಂಪೇಠ ಮಂಡಲದ ಥೋಮಿಡಿರೆಕುಲ ಗ್ರಾಮದಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಪೋಷಕರು ಯುವ ಜೋಡಿಯ ಪ್ರೇಮ ವಿವಾಹ ನಿರಾಕರಿಸಿದ್ದಕ್ಕಾಗಿ 20 ವರ್ಷದ ಸುಶೀಲಾ ಎಂಬುವರು ಮನೆಯಲ್ಲಿ ಆತ್ಮಹತ್ಯೆ ಶರಣಾಗಿದ್ದಾರೆ. ಈ ವಿಷಯ ತಿಳಿದ ಆಕೆಯ ಲವರ್ ಶ್ರೀರಾಮುಲು(25) ಹೊಲದಲ್ಲಿನ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ.