ಬೆಂಗಳೂರು:ಲಾಕ್ಡೌನ್ ನಂತರ ಸೀಲ್ಡೌನ್ ಹಂತಕ್ಕೆ ತಲುಪಿದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತ ಸ್ಪಷ್ಟನೆ ನೀಡಿದ್ದು, ಬೆಂಗಳೂರಿನ ಎರಡು ವಾರ್ಡ್ಗಳನ್ನು ಮಾತ್ರ ಸೀಲ್ ಡೌನ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಎರಡು ವಾರ್ಡ್ಗಳಿಗೆ ಮಾತ್ರ ಸೀಲ್ಡೌನ್.. ಬಿಬಿಎಂಪಿ ಆಯುಕ್ತರ ಟ್ವೀಟ್ - ಭಾಸ್ಕರ್ ರಾವ್
ಬೆಂಗಳೂರಿಗರನ್ನು ಸೀಲ್ಡೌನ್ ಭೀತಿ ಕಾಡುತ್ತಿದೆ. ಇದಕ್ಕೆ ಸ್ಪಷ್ಟನೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಬೆಂಗಳೂರಿನಲ್ಲಿ ಎರಡು ವಾರ್ಡ್ಗಳಿಗೆ ಮಾತ್ರ ಸೀಲ್ಡೌನ್ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಿಬಿಎಂಪಿ
ಸೀಲ್ಡೌನ್ ಬಗ್ಗೆ ಟ್ವೀಟ್ ಮಾಡಿರುವ ಅವರು ಬಾಪೂಜಿನಗರ (ಬಿಬಿಎಂಪಿಯ 134 ವಾರ್ಡ್), ಪಾದರಾಯನಪುರ (ಬಿಬಿಎಂಪಿಯ 135 ವಾರ್ಡ್)ಗಳನ್ನು ಸೀಲ್ಡೌನ್ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದರ ಜೊತೆಗೆ ಕೊರೊನಾ ಸೋಂಕಿನ ಹೊಸ ಪ್ರಕರಣಗಳು ಪತ್ತೆಯಾದ ಕಾರಣ ಸೀಲ್ ಡೌನ್ ಮಾಡಲಾಗಿದ್ದು, ಜನರು ಭಯಪಡುವ ಅಗತ್ಯವಿಲ್ಲ, ಮಾಧ್ಯಮಗಳು ಊಹಾಪೋಹಗಳನ್ನು ಹರಡಿಸದಂತೆಯೂ ಇದೇ ವೇಳೆ ಅವರು ಮನವಿ ಮಾಡಿದ್ದಾರೆ.