ಹೈದರಾಬಾದ್ (ತೆಲಂಗಾಣ):11 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಇಬ್ಬರು ಖದೀಮರ ಬಂಧನ - kannada newspaper, etvbharat, Two arrested, rape, minor girl, 11-year-old girl, POSCO, judicial remand, Hyderabad
ಸಿನಿಮಾ ತೋರಿಸುವುದಾಗಿ ಆಮಿಷ ಒಡ್ಡಿ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ ಘಟನೆ
![ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಇಬ್ಬರು ಖದೀಮರ ಬಂಧನ](https://etvbharatimages.akamaized.net/etvbharat/prod-images/768-512-3917244-thumbnail-3x2-rape.jpg)
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಡಿ ಇಬ್ಬರ ಬಂಧನ
ಸಿನಿಮಾ ತೋರಿಸುವುದಾಗಿ ಆಮಿಷ ಒಡ್ಡಿ ಆಕೆಯನ್ನು ಕರೆದೊಯ್ದ ಇಬ್ಬರು ಖದೀಮರು. ಸಿನಿಮಾ ತೋರಿಸುವುದರ ಬದಲು ನಿರ್ಜನ ಪ್ರದೇಶದ ಕಟ್ಟಡವೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ದುಷ್ಕೃತ್ಯವೆಸಗಿ ಕಟ್ಟಡದಿಂದ ಹೊರ ಬರುವ ಹೊತ್ತಿಗೆ ಸಾರ್ವಜನಿಕರು ಈ ಖದೀಮರನ್ನು ಗಮನಿಸಿದ್ದು, ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಾಲಕಿಯ ಹೇಳಿಕೆ ಪಡೆದ ಪೊಲೀಸರು ಪೋಸ್ಕೊ ಕಾಯ್ದೆಯಡಿಪ್ರಕರಣ ದಾಖಲಿಸಿದ್ದು ಆರೋಪಿಯನ್ನು ಭಾನುವಾರ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆಯೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.