ನವದೆಹಲಿ:ಭಾರತದ ಲೇಹ್ ಹಾಗೂ ಜಮ್ಮು ಮತ್ತು ಕಾಶ್ಮೀರ ಪ್ರದೇಶಗಳನ್ನು ಚೀನಾ ಭಾಗವೆಂದು ತೋರಿಸಿ ಎಡವಟ್ಟು ಮಾಡಿಕೊಂಡಿದ್ದ ಟ್ವಿಟರ್ ಇದೀಗ ಭಾರತದ ಬಳಿ ಕ್ಷಮೆ ಯಾಚಿಸಿದೆ.
ಲೇಹ್ ಹಾಗೂ ಜಮ್ಮು - ಕಾಶ್ಮೀರದಲ್ಲಿ ಲೈವ್ ವಿಡಿಯೋವೊಂದನ್ನು ರೆಕಾರ್ಡ್ ಮಾಡುವ ವೇಳೆ ಲೊಕೇಷನ್ ಟ್ಯಾಗ್ನಲ್ಲಿ ಆ ಸ್ಥಳಗಳು ಚೀನಾಗೆ ಸೇರಿವೆ ಎಂದು ಟ್ವಿಟರ್ ತೋರಿಸಿದೆ. ಈ ಬಗ್ಗೆ ಲಿಖಿತ ರೂಪದಲ್ಲಿ ಕ್ಷಮೆಯಾಚಿಸಿ, ಅಫಿಡವಿಟ್ ಸಲ್ಲಿಸುವಂತೆ ಭಾರತದ ಜಂಟಿ ಸಂಸದೀಯ ಸಮಿತಿಯು ಟ್ವಿಟರ್ಗೆ ಸೂಚಿಸಿತ್ತು.