ಕರ್ನಾಟಕ

karnataka

ETV Bharat / bharat

''ಕೊರೊನಾ ಕಾಟ ಮುಗಿದ್ಮೇಲೂ ಬೇಕಾದ್ರೆ ಮನೆಯಿಂದಲೇ ಕಾರ್ಯನಿರ್ವಹಿಸಿ'' - ಕೋವಿಡ್ 19

ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಉದ್ಯೋಗಿಗಳು ಬಯಸಿದರೆ ಮನೆಯಿಂದಲೇ ಕಾರ್ಯನಿರ್ವಹಿಸಬಹುದು ಎಂದು ಟ್ವಿಟರ್ ಸ್ಪಷ್ಟನೆ ನೀಡಿದೆ.

twitter
ಟ್ವಿಟರ್​​

By

Published : May 13, 2020, 11:02 PM IST

ಕ್ಯಾಲಿಫೋರ್ನಿಯಾ(ಅಮೆರಿಕ):ಉದ್ಯೋಗಿಗಳು ಬಯಸಿದರೆ ಕೊರೊನಾ ಮಹಾಮಾರಿ ಮುಗಿದ ಮೇಲೆ ಕೂಡಾ ಮನೆಯಿಂದ ಕೆಲಸ ಮಾಡಬಹುದು ಎಂದು ಸಾಮಾಜಿಕ ಜಾಲತಾಣ ಸಂಸ್ಥೆ ಟ್ವಿಟರ್​ ಹೇಳಿದೆ.

ಮನೆಯಿಂದಲೇ ಕಾರ್ಯನಿರ್ವಹಣೆ ಮಾಡುವುದು ಅನಿರ್ದಿಷ್ಟಾವಧಿಗೆ ಮುಂದುವರೆಯಲಿದ್ದು, ಸೆಪ್ಟೆಂಬರ್‌ಗೂ ಮುನ್ನ ಕಚೇರಿಯಲ್ಲಿ ಯಾವುದೇ ರೀತಿಯ ಹೊಸ ಹುದ್ದೆಗಳಿಗೆ ನೇಮಕಾತಿಯೂ ನಡೆಯುವುದಿಲ್ಲ ಎಂದು ಟ್ವಿಟರ್ ಸ್ಪಷ್ಟನೆ ನೀಡಿದೆ.

ಒಂದು ವೇಳೆ ಉದ್ಯೋಗಿ ಬಯಸಿದರೆ ಕಚೇರಿಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಬರಬಹುದಾಗಿದೆ. ಒಂದು ತಿಂಗಳೊಳಗೆ ಕೆಲವು ನಿರೀಕ್ಷೆಗಳಿದ್ದು, ಯಾವುದೇ ವ್ಯವಹಾರಕ್ಕೆ ಪ್ರಯಾಣ ಮಾಡುವ ಅನಿವಾರ್ಯತೆ ಇಲ್ಲ. ಈ ವರ್ಷ ಪೂರ್ತಿ ಕಂಪನಿಯಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯುವುದಿಲ್ಲ ಎಂದು ಟ್ವಿಟರ್ ಹೇಳಿದೆ.

ಈಗ ಸದ್ಯಕ್ಕೆ ಫೇಸ್‌ಬುಕ್‌, ಗೂಗಲ್‌ ಕಂಪನಿಯ ಬಹುತೇಕ ನೌಕರರು ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದು, ಈ ಅವಧಿ ಮತ್ತಷ್ಟು ಮುಂದೂಡಿಕೆಯಾಗುವ ಸಾಧ್ಯತೆಯಿದೆ.

ABOUT THE AUTHOR

...view details