ಹೈದರಾಬಾದ್:ವಿದೇಶಿಗರೆಂದು ಮಣಿಪುರದ ನಿವಾಸಿಗಳಿಗೆ ಮ್ಯಾನೇಜರ್ಸ್ ಮತ್ತು ಸೆಕ್ಯೂರಿಟಿ ಗಾರ್ಡ್ಸ್ ಸ್ಟಾರ್ ಮಾರ್ಕೆಟ್ ಒಳಗೆ ಹೋಗಲು ಅನುಮತಿಸದೆ ಜನಾಂಗೀಯ ತಾರತಮ್ಯ ಎಸಗಿದ್ದಾರೆ ಎಂಬ ಆರೋಪ ಹೈದರಾಬಾದ್ನ ವನಸ್ಥಲಿಪುರಂನಲ್ಲಿ ಕೇಳಿ ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಯೊಬ್ಬ ಸಚಿವ ಕೆಟಿಆರ್ಗೆ ಟ್ವೀಟ್ ಮಾಡಿದ್ದಾರೆ. ತಕ್ಷಣ ಸ್ಪಂದಿಸಿದ ಸಚಿವರು, ಕ್ರಮ ಕೈಗೊಳ್ಳುವಂತೆ ಡಿಜಿಪಿಗೆ ಆದೇಶಿಸಿದರು. ಸಚಿವರ ಆದೇಶದ ಮೇರೆಗೆ ಮ್ಯಾನೇಜರ್ಸ್ ಮತ್ತು ಸೆಕ್ಯೂರಿಟಿ ಗಾರ್ಡ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಮ್ಮ ಆಧಾರ್ ಕಾರ್ಡ್ಗಳನ್ನು ತೋರಿಸಿದೆವು. ಆದರೂ ಸೆಕ್ಯೂರಿಟಿ ಗಾರ್ಡ್ಸ್ ಲೆಕ್ಕಿಸಲಿಲ್ಲ. ಹೀಗಾಗಿ ಜನಾಂಗೀಯ ತಾರತಮ್ಯ ನಡೆಸಿದ ಸ್ಟಾರ್ ಮಾರುಕಟ್ಟೆ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮಣಿಪುರದ ನಿವಾಸಿ ಜೋನ್ ಟ್ವಿಟರ್ ಮೂಲಕ ಸಚಿವರಿಗೆ ಪೋಸ್ಟ್ ಮಾಡಿದ್ದಾನೆ.