ಟುಟಿಕೋರಿನ್(ತಮಿಳುನಾಡು):ಟುಟಿಕೋರಿನ್‌ನಲ್ಲಿರುವ ವಿ ಒ ಚಿದಂಬರನಾರ್ ಬಂದರು ತನ್ನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಪಾರ್ಸಲ್ ಆಮದು ಮಾಡಿಕೊಳ್ಳುವ ಮೂಲಕ ಅದರ ನಿರ್ವಹಣೆಯನ್ನು ಸಹ ಕೈಗೊಂಡಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ನ ಮಿನಾ ಸಕ್ರ್ ಬಂದರಿನಿಂದ 254.52 ಮೀಟರ್ ಉದ್ದದ ‘ಎಂವಿ ಇಲೆಟ್ರಾ’ ಹಡಗು ವಿ ಒ ಚಿದಂಬರನಾರ್ ಬಂದರಿಗೆ ಭಾನುವಾರ ಆಗಮಿಸಿದೆ. ಇದು ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್ ಮತ್ತು ಈಸ್ಟರ್ನ್ ಬಲ್ಕ್ ಟ್ರೇಡಿಂಗ್ ಮತ್ತು ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್‌ಗೆ ಅವಶ್ಯವಾಗಿದ್ದ 934.353 ಟನ್ ಸುಣ್ಣದ ಕಲ್ಲನ್ನು ಹೊತ್ತು ತಂದಿದೆ.
ಬಂದರು ಅಧಿಕಾರಿಗಳ ಪ್ರಕಾರ, ಬರ್ತ್ IXನಲ್ಲಿರುವ ಹಡಗು ಮೂರು ಹಾರ್ಬರ್ ಮೊಬೈಲ್ ಕ್ರೇನ್‌ಗಳನ್ನು ಬಳಸಿ ದಿನಕ್ಕೆ 50,000 ಟನ್‌ಗಳನ್ನು ಹೊರಹಾಕುವ ಸಾಮರ್ಥ್ಯ ಹೊಂದಿದ್ದು, ಸದ್ಯ ತನ್ನ ಕೆಲಸ ಪ್ರಾರಂಭಿಸಿದೆ. ಮಂಗಳವಾರ ಸಂಜೆ 6 ಗಂಟೆಯೊಳಗೆ ಸಂಪೂರ್ಣ ರವಾನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಈ ಹಿಂದೆ ಸೆಪ್ಟಂಬರ್ 16, 2019 ರಂದು 89,777ಟನ್ ಕಲ್ಲಿದ್ದಲಿನೊಂದಿಗೆ ಬಂದಿದ್ದ ಅತಿ ಹೆಚ್ಚು ಪಾರ್ಸಲ್ ಗಾತ್ರದ ಹಡಗು ‘ಎಂವಿ ಎನ್ಬಿಎ ವೆರ್ಮೀರ್’ನ ಇದೇ ಬಂದರಿನಲ್ಲಿ ನಿರ್ವಹಿಸಲಾಯಿತು. 2019ರ ಡಿಸೆಂಬರ್‌ವರೆಗಿನ ಹಣಕಾಸು ವರ್ಷದಲ್ಲಿ 9.55 ಲಕ್ಷ ಟನ್ ಸುಣ್ಣದ ಕಲ್ಲುಗಳನ್ನು ಬರಮಾಡಿಕೊಂಡು ಕಾರ್ಯ ನಿರ್ವಹಿಸಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 7. 22 ಲಕ್ಷ ಟನ್‌ಗಳನ್ನು ನಿರ್ವಹಿಸಿತ್ತು.
ಈ ಮಹತ್ವದ ಮೈಲಿಗಲ್ಲನ್ನು ಸಾಧಿಸುವ ಸಂದರ್ಭದಲ್ಲಿ ಹಡಗು ಏಜೆಂಟರು, ಹಾರ್ಬರ್ ಮೊಬೈಲ್ ಕ್ರೇನ್ ಆಪರೇಟರ್, ಅಧಿಕಾರಿಗಳು ಮತ್ತು ವಿ ಒ ನ ಸಿಬ್ಬಂದಿಯ ಕಠಿಣ ಪರಿಶ್ರಮ ಮತ್ತು ಬದ್ಧತೆಗೆ ನಾನು ಅಭಿನಂದಿಸುತ್ತೇನೆ ಎಂದು ಚಿದಂಬರನಾರ್ ಬಂದರಿನ ಪೋರ್ಟ್ ಟ್ರಸ್ಟ್ ಅಧ್ಯಕ್ಷ ಟಿ ಕೆ ರಾಮಚಂದ್ರನ್ ಹೇಳಿದ್ದಾರೆ.