ಇಸ್ತಾಂಬೂಲ್ (ಟರ್ಕಿ): 20ವರ್ಷದೊಳಗಿನ ಎಲ್ಲರೂ ಕಡ್ಡಾಯವಾಗಿ ಮನೆಯೊಳಗಿರಬೇಕೆಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಆದೇಶ ಹೊರಡಿಸಿದ್ದಾರೆ. ಕೊರೊನಾ ಹರಡುವ ಭೀತಿ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಮಧ್ಯರಾತ್ರಿಯಿಂದಲೇ ಆದೇಶ ಜಾರಿಗೆ ಬಂದಿದೆ. ಕೊರೊನಾ ಹರಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದರ ಜೊತೆಗೆ ಇಸ್ತಾಂಬೂಲ್ ಹಾಗೂ ಅಂಕಾರಾ ಸೇರಿ 31 ನಗರಗಳ ಮಾರ್ಗವನ್ನೂ ಕೂಡಾ ಬಂದ್ ಮಾಡಲಾಗಿದೆ.
ಕೊರೊನಾ ಎಫೆಕ್ಟ್.. 20 ವರ್ಷದೊಳಗಿನ ಎಲ್ಲರೂ ಮನೆಯೊಳಗೇ ಇರಲು ಟರ್ಕಿ ಸರ್ಕಾರ ಆದೇಶ.. - covid-19
ಕೊರೊನಾ ಹರಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದರ ಜೊತೆಗೆ ಇಸ್ತಾಂಬೂಲ್ ಹಾಗೂ ಅಂಕಾರಾ ಸೇರಿ 31 ನಗರಗಳ ಮಾರ್ಗವನ್ನೂ ಕೂಡಾ ಬಂದ್ ಮಾಡಲಾಗಿದೆ.

ರೆಸೆಪ್ ತಯ್ಯಿಪ್ ಎರ್ಡೋಗನ್
ವಾಹನಗಳಿಗೆ ಈ ನಗರಗಳ ಪ್ರವೇಶವನ್ನು 15 ದಿನಗಳ ಕಾಲ ನಿರ್ಬಂಧಿಲಾಗಿದೆ. 65 ವರ್ಷ ಮೇಲ್ಪಟ್ಟ ವೃದ್ಧರೂ ಹಾಗೂ ಇತರ ರೋಗಗಳಿಂದ ಬಳಲುತ್ತಿರುವವರೂ ಕೂಡಾ ಸರ್ಕಾರದ ಆದೇಶ ಪಾಲಿಸಬೇಕೆಂದು ಸೂಚನೆ ನೀಡಲಾಗಿದೆ.